ಆಪ್ತನಿಗೆ ತಮ್ಮ ನಿವಾಸ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿ! ಪರಮೇಶ್ವರ್​ಗೆ ನಿರಾಸೆ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ, ತಾವು ವಾಸವಿರುವ ಕಾವೇರಿ ನಿವಾಸವನ್ನು ತಮ್ಮ ಆಪ್ತ ಕೆ.ಜೆ.ಜಾರ್ಜ್​ ಅವರಿಗೆ ಕೊಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸಿದ್ದರಾಮಯ್ಯ ವಾಸವಿದ್ದ ಅಧಿಕೃತ ಕಾವೇರಿ ನಿವಾಸ ಬೃಹತ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್​​ ಅವರ ಪಾಲಾಗಿದೆ. ಅಲ್ಲದೇ ಕಾವೇರಿ ನಿವಾಸದ ಮೇಲೆ ಕಣ್ಣಿಟ್ಟಿದ್ದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್​​ ಅವರಿಗೆ ನಿರಾಸೆ ಆಗಿದೆ.

ಸರ್ಕಾರದ ಅಧೀನ ಕಾರ್ಯದರ್ಶಿ ಶಿವಕುಮಾರ್, ಸಚಿವ ಕೆ.ಜೆ.ಜಾರ್ಜ್​​ಗೆ ಕಾವೇರಿ ನಿವಾಸವನ್ನು ನೀಡಿ ಆದೇಶ ಹೊಡಿಸಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಿಗೆ ಸಂಪುಟ ಸ್ಥಾನ ಮಾನ ಇರುವುದಿಲ್ಲ. ಹೀಗಾಗಿ ಸರ್ಕಾರಿ ಬಂಗಲೆಯನ್ನ ಬಿಡಬೇಕಾದ ಅನಿವಾರ್ಯತೆ ಸಿದ್ದರಾಮಯ್ಯಗೆ ಎದುರಾಗಿತ್ತು. ಸಿದ್ದರಾಮಯ್ಯ ಮನೆ ಖಾಲಿಮಾಡಿದ್ರೆ ಉಪಮುಖ್ಯಮಂತ್ರಿ ಪರಮೇಶ್ವರ್ ಕಾವೇರಿ ನಿವಾಸಕ್ಕೆ ಬರುವ ಸಂಭವ ಹೆಚ್ಚಾಗಿತ್ತು. ಕಾವೇರಿ ನಿವಾಸಕ್ಕಾಗಿ ಜಿ.ಪರಮೇಶ್ವರ್ ಅರ್ಜಿ ಹಾಕಿದ್ದರು.