ಬೆಕ್ಕಿಗೆ ಚೆಲ್ಲಾಟ, ಇಲಿಗೆ.. ಅಲ್ಲ! ಹಾವಿಗೆ ಪ್ರಾಣ ಸಂಕಟ

ಕೊಪ್ಪಳ: ಸಣ್ಣ ಹಾವಿನ‌ ಮರಿಯೊಂದನ್ನ ಬೆಕ್ಕು ತನ್ನ ಪಂಜದಿಂದ ಹೊಡೆದು ಹೊಡೆದು ಸಾಯಿಸಿದ ಘಟನೆ ಕುಕನೂರಿನ ತಾಲೂಕಿನ ಮುತ್ತಾಳ ಗ್ರಾಮದಲ್ಲಿ ನಡೆದಿದೆ. ಸುಮಾರು 10 ನಿಮಿಷಗಳ ಕಾಲ ನಡೆದ ಹಾವಿನ ಮರಿಯೊಂದಿಗಿನ ಗುದ್ದಾಟವನ್ನ ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.
ಬೆಕ್ಕಿಗೆ ಚೆಲ್ಲಾಟ, ಹಾವಿಗೆ ಪ್ರಾಣ ಸಂಕಟ
ಸಣ್ಣ ಹಾವಿನ ಮರಿ ಬೆಕ್ಕಿನಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದ್ರೂ ಪಟ್ಟು ಬಿಡದ ಬೆಕ್ಕು ಹಾವಿನ ಮರಿಯನ್ನ ಕೊಂದುಹಾಕಿದೆ. ತನ್ನ ಪಂಜದಿಂದ ಹೊಡೆದು ಬಾಯಿಂದ ಕಚ್ಚಿ ಕಚ್ಚಿ ಸಾವಿನ ದಾರಿಯತ್ತ ಹೊತ್ತೊಯ್ದಿದೆ. ಬೆಕ್ಕಿನ ಆವೇಶಕ್ಕೆ ಸಿಕ್ಕ ಹಾವಿನ‌ ಮರಿ ನರಳಾಡಿ ಕೊನೆಗೆ ತನ್ನ ಪ್ರಾಣವನ್ನೆ ಕಳೆದುಕೊಂಡಿದೆ. ಸತ್ತರೂ ಹಾವನ್ನು ಬಿಡದ ಬೆಕ್ಕು ಕೊನೆಗೆ ಬಾಯಲ್ಲಿ ಕಚ್ಚಿಕೊಂಡು ಹೋಯ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv