ಫೇಸ್ ಬುಕ್‌ನಲ್ಲಿ ಜಾತಿ ನಿಂದನೆ ಪೋಸ್ಟ್, ಆರೋಪಿ ವಿರುದ್ಧ ಕಂಪ್ಲೇಂಟ್

ಆನೇಕಲ್: ಫೇಸ್ ಬುಕ್‌ನಲ್ಲಿ ಜಾತಿ ನಿಂದನೆಗೆ ಸಂಬಂಧಪಟ್ಟಂತೆ ಠಾಣೆ ಮೇಟ್ಟಿಲೇರಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆನೇಕಲ್ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವುದರಿಂದ ಬಲಗೈ ಮತ್ತು ಎಡಗೈ ಪಂಗಡಗಳ ನಡುವೆ ಬೆಂಕಿ ಹಚ್ಚಲು ಕಿಡಿಗೇಡಿ ಯುವಕ ಯತ್ನಿಸುತ್ತಿರೋ ಆರೋಪ ಕೇಳಿಬಂದಿದೆ.ಆನೇಕಲ್ ತಾಲ್ಲೂಕಿನ ಮಂಜುನಾಥ ಅಲಿಯಾಸ್ ಮಂಜ ಎಂಬಾತ ಫೇಸ್ ಬುಕ್‌ನಲ್ಲಿ ಕೀಳುಮಟ್ಟದ ಟೀಕೆ ಮಾಡಿದ್ದ. ಆನೇಕಲ್‌ನಲ್ಲಿ ಹಾಲಿ ಶಾಸಕ ಶಿವಣ್ಣ ಸೋತರೆ ಬಲಗೈನವರನ್ನು ಬಿಡಲ್ಲವೆಂದು ಕಿಡಿಗೇಡಿ ಅವಾಜ್ ಹಾಕಿದ್ದಾನಂತೆ. ಇದರಿಂದ ಬಲಗೈ ಪಂಗಡದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠರನ್ನ ಭೇಟಿಯಾಗಿ ದೂರು ದಾಖಲಿಸಿದ್ದಾರೆ. ಕೂಡಲೇ ಆರೋಪಿಯನ್ನ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಪಕ್ಷಾತೀತವಾಗಿ ಸಮುದಾಯದ ಎಲ್ಲಾ ಮುಖಂಡರು ಹೆಬ್ಬಗೋಡಿ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv