ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಪ್ರಕರಣ ದಾಖಲು..!

ನವದೆಹಲಿ : ಚುನಾವಣಾ ಅಫಿಡವಿಟ್​ನಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್​ನ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ತೌಹೀದ್ ಸಿದ್ದಿಕಿ ಸ್ಮೃತಿ ಇರಾನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಸ್ಮೃತಿ ಇರಾನಿ ತಮ್ಮ ನಾಮಪತ್ರದಲ್ಲಿ ದೆಹಲಿ ಯುನಿವರ್ಸಿಟಿಯಲ್ಲಿ 1994ರ ಸಾಲಿನಲ್ಲಿ ಬಿಕಾಂ ಮುಗಿಸಿದ್ದಾಗಿ ಹೇಳಿದ್ದರು. ಆದ್ರೆ, 2019ರ ಲೋಕಸಭಾ ಚುನಾವಣೆಗೆ ಸ್ಮೃತಿ ಇರಾನಿ ಸಲ್ಲಿಸಿದ ನಾಮಪತ್ರದಲ್ಲಿ ಡಿಗ್ರಿ ಮುಗಿದಿಲ್ಲಾ ಅಂತ ತಿಳಿಸಿದ್ದಾರೆ .ಈ ಮೂಲಕ ಸ್ಮೃತಿ ಇರಾನಿ ಚುನಾವಣಾ ಆಯೋಗದ ಮುಂದೆ ಸುಳ್ಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಅಂತ ಸಿದ್ದಿಕಿ ಆಗ್ರಹಿಸಿದ್ದಾರೆ.