ಫ್ಯಾನ್​​​ ಮೊಬೈಲ್ ಕಸಿದುಕೊಂಡ ಸಲ್ಮಾನ್​ ಖಾನ್, ದೂರು ದಾಖಲು

ಮುಂಬೈ: ಬಾಲಿವುಡ್​ ಸ್ಟಾರ್​ ಸಲ್ಮಾನ್​ ಖಾನ್​ ವಿರುದ್ಧ ಡಿ.ಎನ್.ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮುಂಬೈನ ಮಾಧ್ಯಮಗಳು ವರದಿ ಮಾಡಿವೆ. ಡಿಎನ್​ಎ ಠಾಣಾ ವ್ಯಾಪ್ತಿಯಲ್ಲಿ ಸಲ್ಮಾನ್ ಖಾನ್ ಇಂದು ಸೈಕಲ್ ಮೂಲಕ ಹೋಗುತ್ತಿದ್ದರು. ಇದನ್ನ ನೋಡಿದ ಅಭಿಮಾನಿಯೊಬ್ಬರು ವಿಡಿಯೋ ಚಿತ್ರೀಕರಣ ಮಾಡಲು ಆರಂಭಿಸಿದ್ದರು. ಇದನ್ನ ಗಮನಿಸಿದ ಸಲ್ಮಾನ್ ಖಾನ್, ವಿಡಿಯೋ ಚಿತ್ರೀಕರಿಸುತ್ತಿದ್ದ ಅಭಿಮಾನಿಯ ಮೊಬೈಲ್​ ಅನ್ನ ಕಸಿದು ಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನಲ್ಲಿ, ಸಲ್ಮಾನ್​ ಖಾನ್ ಲಿಂಕಿಂಗ್​ ರೋಡ್​ನಲ್ಲಿ ಸೈಕಲ್​ ತುಳಿಯುತ್ತಿದ್ದರು. ನಾನು ಸಲ್ಮಾನ್​ ಖಾನ್ ಸೈಕಲ್​ ತುಳಿಯುತ್ತಿದ್ದ ದೃಶ್ಯವನ್ನ ವಿಡಿಯೋ ಮಾಡುತ್ತಿದ್ದನ್ನ ನೋಡಿದ ಸಲ್ಮಾನ್​ ನನ್ನ ಫೋನ್​ ಕಸಿದುಕೊಂಡಿದ್ದಾರೆ ಎಂದು ಅಭಿಮಾನಿ ಆರೋಪಿಸಿದ್ದಾರೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್​ ಖಾನ್ ಬಾಡಿಗಾರ್ಡ್​, ವಿಡಿಯೋ  ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪ್ರತಿ ದೂರು ದಾಖಲಿಸಿದ್ದಾರೆ. ಯಾವಾಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತೋ ನಂತರ ಸಲ್ಮಾನ್ ಮೊಬೈಲ್​ನ ವಾಪಸ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv