ಜಯಪ್ರದಾ ಬಗ್ಗೆ ಅಖಿಲೇಶ್ ಯಾದವ್ ಸಮ್ಮುಖದಲ್ಲೇ ಕೀಳು ಹೇಳಿಕೆ, ತುಟಿ ಬಿಚ್ಚದ ನಾಯಕರು..!

ನವದೆಹಲಿ:  ಉತ್ತರಪ್ರದೇಶದಲ್ಲಿ ರೇಪ್​ ಹೆಚ್ಚಿದರ ಬಗ್ಗೆ ಪ್ರಶ್ನೆ ಕೇಳಿದಾಗ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹುಡುಗ್ರು ಹುಡುಗ್ರಾಗಿರ್ತಾರೆ. ಅವರು ತಪ್ಪು ಮಾಡಿದ್ರೆ ಅದೇನು ದೊಡ್ಡ ವಿಷಯ ಅಲ್ಲ (ಲಡಕೆ ಲಡಕೆ ಹೋತೆ ಹೈ, ಲಡಕೆಸೆ ಗಲತಿ ಹೋತಿ ಹೈ) ಅಂತಾ ಅತ್ಯಾಚಾರಿಗಳ ಪರ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ಈಗ ಅದೇ ಹಾದಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಮಾಜವಾದಿ ಪಕ್ಷದ ಲೋಕಸಭೆ ಅಭ್ಯರ್ಥಿ ಅಜಂ ಖಾನ್, ನಟಿ ಹಾಗೂ ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ ಅತ್ಯಂತ ಕೀಳು ಮಟ್ಟದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ.

ರಾಮ್​​ಪುರ್​ ಕ್ಷೇತ್ರದಿಂದ ತನ್ನ ಎದುರಾಳಿಯಾಗಿ ಸ್ಪರ್ಧಿಸುತ್ತಿರೋ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ , ಅಜಂ ಖಾನ್​​​ ಕೀಳುಮಟ್ಟದ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ. ರಾಮ್​​​ಪುರ್​​​ನಲ್ಲಿ ಚುನಾವಣಾ ಪ್ರಚಾರದ ವೇಳೆ ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ಸಮ್ಮುಖದಲ್ಲೇ ಮಾತನಾಡಿದ್ದ ಅಜಂ ಖಾನ್, ” ಜಯಪ್ರದಾ ತೊಡುವ ಅಂಡರ್​ವೇರ್​ ಕೂಡ ಖಾಕಿ ಬಣ್ಣದ್ದು” ಎಂದು ಕೀಳುಮಟ್ಟದಲ್ಲಿ ಮಾತನಾಡಿದ್ದರು. ಈ ಹಿನ್ನೆಲೆ ಖಾನ್​​ ವಿರುದ್ಧ ರಾಮ್​​ಪುರ್​​ನಲ್ಲಿ ಪ್ರಕರಣ ದಾಖಲಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ ತಮ್ಮ ಎದುರಲ್ಲೇ ಅಜಂ ಖಾನ್ ಈ ರೀತಿ ಕೀಳು ಮಟ್ಟದಲ್ಲಿ ನಾಲಿಗೆ ಹರಿ ಬಿಡುತ್ತಿದ್ದರೂ, ಅಖಿಲೇಶ್ ಯಾದವ್ ಮಾತ್ರ ತುಟಿ ಬಿಚ್ಚಲಿಲ್ಲ. ಅಜಂ ಖಾನ್ ನಂತರ ಅದೇ ವೇದಿಕೆಯಲ್ಲಿ ಅಖಿಲೇಶ್ ರಾಜಕೀಯ ಭಾಷಣ ಮಾಡಿದ್ರು. ಆದ್ರೆ, ಅಜಂ ಖಾನ್ ಹೇಳಿಕೆ ಬಗ್ಗೆ ಮಾತ್ರ ಒಂದೇ ಒಂದು ಮಾತನಾಡದಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಈ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸೊಂಟದ ಕೆಳಗಿನ ಭಾಷೆ ಬಳಸಿದ ಅಜಂ ಖಾನ್​​​ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಗರಂ ಆಗಿದೆ. ಇದು ಅತ್ಯಂತ ನಾಚಿಕೆಗೇಡಿನ ಹೇಳಿಕೆ. ಅಜಂ ಖಾನ್​ ಯಾವಾಗಲೂ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಟ್ವೀಟ್​ ಮಾಡಿದ್ದಾರೆ. ಹೇಳಿಕೆಗೆ ಸಂಬಂಧಿಸಿದಂತೆ ಆಯೋಗ ಸುಮೋಟೋ ಕೇಸ್​​ ದಾಖಲಿಸಿಕೊಳ್ಳಲಿದೆ. ಅಜಂ ಖಾನ್​ಗೆ ಶೋಕಾಸ್​​ ನೋಟಿಸ್​ ಕಳಿಸಲಾಗುತ್ತದೆ. ಅಲ್ಲದೆ ಅಜಂ ಖಾನ್​​ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಲಿದ್ದೇವೆ ಎಂದು ರೇಖಾ ಶರ್ಮಾ ಹೇಳಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv