ಕ್ಯಾರೆಟ್ ಜ್ಯೂಸ್ ಕಣ್ಣಿನ ಪೋಷಣೆಗೆ ಮಾತ್ರವಲ್ಲ, ಇದರಲ್ಲಿದೆ ಆರೋಗ್ಯದ ಅನೇಕ ಗುಟ್ಟು..!

ಕ್ಯಾರೆಟ್ ಬರೀ ನೋಡಲು ಅಷ್ಟೇ ಅಲ್ಲ ತಿನ್ನಲೂ ಸಖತ್ ಖುಷಿ ಕೊಡೋವಂಥ ತರಕಾರಿ. ಅಷ್ಟೇ ಅಲ್ಲ ಇದು ಉತ್ತಮ ಪೋಷಕಾಂಶಗಳ ಆಗರ. ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಬೆಟಾ ಕ್ಯಾರೋಟಿನ್ ಅಂಶ ಕ್ಯಾರೆಟ್‌ನಲ್ಲಿ ಇರುವುದರಿಂದ ದೇಹದಲ್ಲಿ ವಿಟಮಿನ್ A ಉತ್ಪತ್ತಿ ಮಾಡುತ್ತದೆ. ಕ್ಯಾರೆಟ್‌ನಲ್ಲಿ ಆಂಟಿ ಆ್ಯಂಕ್ಸಿಡೆಂಟ್, ಐರನ್, ಪೋಟ್ಯಾಸಿಯಂ, ಫಾಸ್ಫರಸ್, ಬೀಟಾ ಕೆರೋಟಿನ್, ವಿಟಮಿನ್ ಎ, ಬಿ-1, ಬಿ-2, ಬಿ-3, ಬಿ-6, ಸಿ, ಇ ಮತ್ತು ಕೆ ಅಂಶಗಳು ಹೆಚ್ಚಾಗಿದ್ದು, ಹಲವು ರೋಗಗಳನ್ನು ತಡೆಗಟ್ಟುತ್ತದೆ. ಕ್ಯಾರೆಟ್ ತ್ವಚೆಗೂ ಹೆಚ್ಚು ಉಪಯೋಗಕಾರಿ.

ಆರೋಗ್ಯದ ಗುಟ್ಟು

ತೂಕ ಇಳಿಕೆ: ತೂಕ ಇಳಿಸುವಲ್ಲಿ ಹಲವಾರು ಹಣ್ಣುಗಳು ಸಹಾಯ ಮಾಡುತ್ತವೆ. ಅವುಗಳಲ್ಲಿ ಕ್ಯಾರೆಟ್ ಪಾತ್ರವೂ ದೊಡ್ಡದ್ದು. ಕ್ಯಾರೆಟ್ ಅತ್ಯುತ್ತಮ ನಾರಿನಾಂಶ ಹೊಂದಿದೆ. ಉತ್ತಮ ನಾರಿನಾಂಶ ಇರುವಾಗ ಜೀರ್ಣಕ್ರಿಯೂ ಸುಗಮವಾಗಿ ನಡೆಯುತ್ತದೆ. ಜತೆಗೆ ವಾಗಿದೇಹದ ತ್ಯಾಜ್ಯಗಳನ್ನು ಹೊರ ಹಾಕುತ್ತದೆ. ನೈಸರ್ಗಿಕ ಸಿಗುವ ಕ್ಯಾರೆಟ್ ರಸವು ತೂಕವನ್ನು ಬಹುಬೇಗ ಇಳಿಸುತ್ತದೆ. ತೂಕ ನಷ್ಟಗೊಳಿಸುವುದರ ಜತೆಗೆ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಲ್ಲದ್ದು.ಇದರಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ದೇಹದ ಬೊಜ್ಜನ್ನು ತಡೆಗಟ್ಟುತ್ತದೆ.

ಕಣ್ಣುಗಳಿಗೆ ಅತ್ಯುತ್ತಮ: ಪ್ರತಿನಿತ್ಯ ಹಸಿ ಕ್ಯಾರೆಟ್ ಹಾಗೂ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ಉತ್ತಮ ದೃಷ್ಠಿಯನ್ನು ಪಡೆಯಬಹುದು. ಇದರಲ್ಲಿರುವ ಲ್ಯೂಟಿನ್ ಮತ್ತು ಬೀಟಾ ಕೆರೋಟಿನ್‌ ಅಂಶ ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುತ್ತವೆ. 100 ಗ್ರಾಂ ತರಕಾರಿಗಳೊಂದಿಗೆ ತಯಾರಿಸಿದ ಕ್ಯಾರೆಟ್ ಜ್ಯೂಸ್‌ನಿಂದ ಶೇ. 400 ರಷ್ಟು ವಿಟಮಿನ್ A ಒದಗಿಸುತ್ತದೆ. ಇದು ಕಣ್ಣಿನ ದೃಷ್ಠಿ, ಮಂಜಾಗುವಿಕೆ, ಇರುಳುಗಣ್ಣಿವ ಸಮಸ್ಯೆ ನಿವಾರಣೆಗೆ ಉಪಯುಕ್ತ.

ಆ್ಯಸಿಡಿಟಿ: ಆ್ಯಸಿಡಿಟಿಗೆ ಕ್ಯಾರೆಟ್ ಜ್ಯೂಸ್ ಉತ್ತಮ ನೈಸರ್ಗಿಕ ಔಷಧಿ ಎಂದೇ ಹೇಳಬಹುದು. 100 ಗ್ರಾಂ ಕ್ಯಾರೆಟ್‌ನಲ್ಲಿ ಶೇ. 5ರಷ್ಟು ವಿಟಮಿವ್ ಬಿ, ಶೇ 33 ರಷ್ಟು ವಿಟಮಿನ್ ಎ, ಹಾಗೂ ಶೇ. 9 ರಷ್ಟು ವಿಟಮಿನ್ ಸಿ ಅಂಶ ಇದ್ದು, ಕ್ಯಾನ್ಸರ್‌ ವಿರುದ್ಧ ಸೇಫ್ ಗಾರ್ಡ್‌ನಂತೆ ಕೆಲಸ ಮಾಡುತ್ತದೆ.

ಹೃದಯದ ಆರೋಗ್ಯ: ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಹಾಗೂ ಹೃದಯ ಘಾತದಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಆದ್ರೆ ಕ್ಯಾರೆಟ್ ತಿನ್ನುವುದರಿಂದ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು. ಪ್ರತಿ ದಿನ ಕ್ಯಾರೆಟ್ ಜ್ಯೂಸ್ ಕುಡಿದರೆ ಹೃದಯದ ಬಡಿತದ ಮಧ್ಯೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುತ್ತವೆ. ರಕ್ತದೋತ್ತಡವನ್ನು ಸಮತೋಲನಗೊಳಿಸುತ್ತದೆ: ಕ್ಯಾರೆಟ್‌ ಪೊಟ್ಯಾಶಿಯಂ ಹಾಗೂ ಬಿಟಾ ಕ್ಯಾರೋಟಿನ್‌ಗಳಿಂದ ತುಂಬಿದ್ದು, ಇವರೆಡು ದೇಹದಲ್ಲಿನ ರಕ್ತದೋತ್ತಡವನ್ನು ಕಡಿಮೆ ಮಾಡುತ್ತವೆ. ಹೆಚ್ಚಿನ ರಕ್ತದೋತ್ತಡದಿಂದ ಬಳಲುತ್ತಿರುವವರು ನಿಯಮಿತವಾಗಿ ಕ್ಯಾರೆಟ್ ರಸ ಕುಡಿಯಬಹುದು.

ಹಲ್ಲುಗಳ ರಕ್ಷಣೆ: ಊಟದ ನಂತರ ಹಸಿ ಕ್ಯಾರೆಟ್ ಸೇವನೆಯಿಂದ ಬಾಯಲ್ಲಿ ಲಾಲಾರಸ ಉತ್ಪಾದನೆ ಹೆಚ್ಚುತ್ತದೆ. ಇದು ಹಲ್ಲು ಹುಳುಕಾಗುವ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಅಲ್ಲದೇ ಕ್ಯಾರೆಟ್‌ನಲ್ಲಿ ವಿಟಮಿನ್ ಸಿ ಇರುವುದಿಂದ ಹೆಚ್ಚು ಲಾಭಕಾರಿ. ಹಲ್ಲಿನ ಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ದಿನ ಕ್ಯಾರೆಟ್ ರಸ ಸೇವಿಸಿ.

ಹೇರ್ ಹೆಲ್ತ್: ಕ್ಯಾರೆಟ್‌ನಲ್ಲಿರುವ ವಿಟಮಿನ್ -ಎ ಕೂದಲಿಗೆ ರಕ್ಷಣೆ ಒದಗಿಸುತ್ತದೆ. ಕ್ಯಾರೆಟ್‌ನಲ್ಲಿರುವ ಪೋಷಕಾಂಶಗಳು ಕೂದಲನ್ನು ಧೃಡಗೊಳಿಸಿ ಬೆಳವಣಿಗೆ ಕಾರಣವಾಗುತ್ತದೆ. ಅಲ್ಲದೇ ಇದು ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಕೂದಲು ಉದುರುವುದನ್ನು ತಡೆಗಟ್ಟಿ, ರಕ್ಷಣೆ ಒದಗಿಸುತ್ತದೆ. ಕೂದಲಿನ ಗಟ್ಟಿತನವನ್ನು ಕ್ಯಾರೆಟ್ ಹೆಚ್ಚಿಸುತ್ತದೆ. ಕ್ಯಾರೆಟ್ ಜ್ಯೂಸ್ ಪ್ರತಿ ದಿನ ಸೇವಿಸಿದರೆ ಆರೋಗ್ಯಯುತ ಹೇರ್ ನಿಮ್ಮದಾಗಿಸಿಕೊಳ್ಳಬಹುದು. ಕೂದಲು ಉದ್ದವಾಗಿ ಹಾಗೂ ಶೈನಿಂಗ್ ಆಗಿ ಕಾಣಲು ಕ್ಯಾರೆಟ್ ಜ್ಯೂಸ್ ಹೆಚ್ಚು ಉಪಯೋಗಕಾರಿ.

ಲಿವರ್ ಹೆಲ್ತ್
ಕ್ಯಾರೆಟ್​ ಕೂಡಾ ಲಿವರ್‌ನ ಆರೋಗ್ಯ ಕಾಪಾಡುವಲ್ಲಿ ಸಹಕಾರಿ. ಹೆಚ್ಚೆಚ್ಚು ಕ್ಯಾರೆಟ್‌ ಸೇವಿಸೋದ್ರಿಂದ ಲಿವರನಲ್ಲಿನ ರಕ್ತ ಚಲನೆ ಹೆಚ್ಚಾಗುತ್ತದೆ. ಕ್ಯಾರೆಟ್ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. ಈ ಕಾರಣಕ್ಕಾಗಿ. ಫ್ಯಾಟ್‌ನಿಂದ ದೂರವಿಡಿಸುತ್ತದೆ. ಕ್ಯಾರೆಟ್ ರಸವನ್ನು ಸೇವಿಸುವುದರಿಂದ ಕರುಳಿನ ಸಮಸ್ಯೆಗಳು ಸುಲಭವಾಗಿ ನಿವಾರಿಸಬಹುದು. ಅಲ್ಲದೇ ಸಂಧಿವಾತ ಕಾಯಿಲೆಗಳಿಗೂ ಕ್ಯಾರೆಟ್ ಉಪಯುಕ್ತ ಎಂದು ಹೇಳಲಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬ್ಯಾಕ್ಟೇರಿಯಾ, ವೈರಸ್‌ಗಳಿಂದ ದೂರವಿರಿಸುತ್ತದೆ. ನೆನಪಿನ ಶಕ್ತಿ ಹೆಚ್ಚಿಸುತ್ತದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv