ಹೊಟ್ಟೆಯಲ್ಲಿನ ಕೊಬ್ಬನ್ನ ಕಡಿಮೆ ಮಾಡಲು ಏಲಕ್ಕಿ ಬೇಕುರಿ..!

ಏಲಕ್ಕಿ ಸಾಮಾನ್ಯವಾಗಿ ಭಾರತೀಯ ಅಡಿಗೆಗಳಲ್ಲಿ ಕಂಡುಬರುವ ಮಸಾಲೆಯಾಗಿದೆ. ಪಲಾವ್,​ ಬಿರಿಯಾನಿ, ನಾನ್​ವೆಜ್​ ಅಡಿಗೆಗಳಿಗೆ ಏಲಕ್ಕಿ ಕಂಪಲ್​ಸರಿ. ಅಜೀರ್ಣ, ಕೆಮ್ಮು ಮತ್ತು ಶೀತದಂತಹ ಕಾಯಿಲೆಗಳನ್ನು ಗುಣಪಡಿಸಲು ಏಲಕ್ಕಿ ಪರಿಣಾಮಕಾರಿ ಮನೆ ಮದ್ದಾಗಿದೆ. ಅಷ್ಟೇ ಅಲ್ಲ, ಏಲಕ್ಕಿಯು ದೇಹದ ತೂಕವನ್ನು ಕಡಿಮೆ ಮಾಡಲು ಸಹ ನಿಮಗೆ ಸಹಾಯ ಮಾಡುತ್ತದೆ. ಯಾಕಂದ್ರೆ ಅದು ಹೊಟ್ಟೆಯಲ್ಲಿ ಕೊಬ್ಬಿನಾಂಶ ಶೇಖರಣೆಯಾಗುವುದನ್ನ ತಡೆಗಟ್ಟುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ, ರಕ್ತದಲ್ಲಿ ಗ್ಲುಕೋಸ್ ಮಟ್ಟ ಹೆಚ್ಚಿಸುವುದನ್ನ ತಡೆಯುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ತೂಕ ನಷ್ಟಕ್ಕೆ ನೆರವಾಗುತ್ತದೆ.

ತೂಕ ಕಳೆದುಕೊಳ್ಳುವಲ್ಲಿ ಏಲಕ್ಕಿ ಹೇಗೆ ಸಹಾಯ ಮಾಡುತ್ತದೆ ಎಂದು ಹೇಳುವ ಇತರ ಕಾರಣಗಳು ಇಲ್ಲಿವೆ:

1. ಹೊಟ್ಟೆಯಲ್ಲಿ ಕೊಬ್ಬಿನ ಶೇಖರಣೆ ತಡೆಯುತ್ತದೆ: ಸಾಮಾನ್ಯವಾಗಿ ಹೊಟ್ಟೆಯ ಭಾಗದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗುತ್ತದೆ. ಏಲಕ್ಕಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗುವುದನ್ನ ತಡೆಯಬಹುದು. ಜೊತೆಗೆ ಇದು ಹೃದಯನಾಳಕ್ಕೆ ಸಂಭವಿಸಬಹುದಾದ ಅಪಾಯಗಳನ್ನು ಕಡಿಮೆ ಮಾಡುತ್ತದೆ.

2. ಅನಗತ್ಯ ಟಾಕ್ಸಿನ್ಸ್​ಗಳನ್ನು ಹೊರಹಾಕುತ್ತದೆ: ಈ ಟಾಕ್ಸಿನ್ಸ್​ಗಳು ರಕ್ತ ಪರಿಚಲನೆಗೆ ತೊಂದರೆ ಉಂಟು ಮಾಡುವುದರ ಜೊತೆಗೆ ಶಕ್ತಿಯ ಮಟ್ಟವನ್ನು ಕಡಿಮೆ ಮಾಡಬಹುದು. ಇಂತಹ ಸಮಯದಲ್ಲಿ ಏಲಕ್ಕಿ ಟಾಕ್ಸಿನ್ಸ್​ ಹೊರ ಹಾಕಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ, ಏಲಕ್ಕಿಯನ್ನ ಮಸಾಲೆ ಟೀನಲ್ಲಿ ಬಳಸಿಕೊಳ್ಳಬಹುದು.

3. ಬ್ಲಾಟಿಂಗ್​ ಕಡಿಮೆ ಮಾಡುತ್ತದೆ: ಏಲಕ್ಕಿ ಸೇವನೆ ಹೊಟ್ಟೆ ಉಬ್ಬುವುದನ್ನ ಕಡಿಮೆ ಮಾಡಿ ಅಜೀರ್ಣ ಸಮಸ್ಯೆಯನ್ನ ನಿವಾರಿಸುತ್ತದೆ. ಜೊತೆಗೆ ಗ್ಯಾಸ್ಟ್ರಿಕ್​ ಸಮಸ್ಯೆಯಿಂದ ಪಾರು ಮಾಡಿ, ವೇಗವಾಗಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

4. ವಾಟರ್​ ರೆಟೆನ್ಷನ್​ ತಡೆಗಟ್ಟುತ್ತದೆ: ತೂಕ ಹೆಚ್ಚಾಗುವು ಅನೇಕ ಕಾರಣಗಳಲ್ಲಿ ವಾಟರ್​ ರೆಟೆನ್ಷನ್​ ಕೂಡಾ ಒಂದು. ಹಾಗೇ ಹೊಟ್ಟೆ ಉಬ್ಬುವುದು ಕೂಡಾ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಏಲಕ್ಕಿ ದೇಹದಲ್ಲಿ ಸೇರಿರುವ ಹೆಚ್ಚಿನ ನೀರಿನ ಪ್ರಮಾಣವನ್ನ ಮೂತ್ರದ ಮೂಲಕ ಹೊರಹಾಕುವ ಮೂಲಕ ತೂಕ ಕಡಿಮೆ ಮಾಡುಲು ಸಹಾಯ ಮಾಡುತ್ತದೆ.

5. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ: ಏಲಕ್ಕಿ ಕೊಬ್ಬು ಕಡಿಮೆ ಮಾಡುವ ಗುಣಲಕ್ಷಣಗಳು ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಇದು ಎಲ್ಡಿಎಲ್ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಏಲಕ್ಕಿ ಉತ್ತಮ ಕೊಲೆಸ್ಟ್ರಾಲ್ ಎಚ್ಡಿಎಲ್ ಅನ್ನು ಸ್ವಲ್ಪ ಕಡಿಮೆ ಮಾಡಬಹುದು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv