ವರ್ಕ್​ಔಟ್ ಆದ್ಮೇಲೆ ಸಾಫ್ಟ್ ಡ್ರಿಂಕ್ಸ್ ಕುಡೀತೀರಾ..? ಹಾಗಾದ್ರೆ ಈ ಸ್ಟೋರಿ ಓದಿ

ಇತ್ತೀಚಿನ ದಿನಗಳಲ್ಲಿ ಜನರು ಫಿಟ್​ನೆಸ್​ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಫಿಟ್​ ಆದ ದೇಹ ಪಡ್ಕೋಬೇಕು ಅಂತಾ ಜಿಮ್​ನಲ್ಲಿ ಬೆವರಿಳಿಸ್ತಾರೆ. ವರ್ಕೌಟ್​ ಆದ ನಂತರ ನೀರು ಅಥವಾ ಜ್ಯೂಸ್​​ ಕುಡಿಯೋದು ಕಾಮನ್. ಆದರೆ ವ್ಯಾಯಾಮ ಮಾಡಿದ ತಕ್ಷಣ ಸಾಫ್ಟ್​ ಡ್ರಿಂಕ್ಸ್​ ಕುಡಿಯೋದ್ರಿಂದ ಕಿಡ್ನಿ ಡ್ಯಾಮೇಜ್​ ಅಗುವ ಸಾಧ್ಯತೆಗಳು ಹೆಚ್ಚಿರುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಅಮೆರಿಕಾದ ಪತ್ರಿಕೆಯೊಂದರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ವ್ಯಾಯಾಮದ ನಂತರ ಹೆಚ್ಚು ಸಕ್ಕರೆ ಅಂಶ ಇರುವಂತಹ ಸೋಡಾ ಅಥವಾ ಪಾನೀಯಗಳನ್ನು ಸೇವಿಸೋದ್ರಿಂದ ವ್ಯಾಯಾಮದಿಂದ ಹೀಟ್ ಆಗಿರೋ ದೇಹಕ್ಕೆ ನೇರವಾಗಿ ಕಿಡ್ನಿ ಮೇಲೆ ಪರಿಣಾಮ ಬೀರುತ್ತೆ ಎಂದು ತಿಳಿಸಿದೆ.

12 ವಯಸ್ಕರನ್ನು ಮೂರು ಭಾಗಗಳಾಗಿ ವಿಂಗಡಿಸಿ ಸಂಶೋಧನೆಗೆ ಒಳಪಡಿಸಲಾಗಿತ್ತು. ಎಲ್ಲರೂ ನಾಲ್ಕು ಗಂಟೆಗಳ ಕಾಲ ವ್ಯಾಯಾಮದಲ್ಲಿ ತೊಡಗಿದ ವೇಳೆ ಪ್ರತ್ಯೇಕವಾಗಿ 2 ಲೀಟರ್ ಸಾಫ್ಟ್ ಡ್ರಿಂಕ್ಸ್ ಹಾಗೂ ನೀರು ನೀಡಲಾಗಿತ್ತು.​ ನಂತರವು ಅದೇ ದ್ರವಗಳನ್ನು 1 ಲೀಟರ್​ನಷ್ಟು​ ತೆಗೆದುಕೊಳ್ಳುವಂತೆ ಹೇಳಲಾಗಿತ್ತು, ಅದರಂತೆ ಎಲ್ಲರೂ ಪಾಲಿಸಿದ್ದರು. ಈ ಪೈಕಿ ಕಿಡ್ನಿ ಕಾರ್ಯ ನಿರ್ವಹಿಸೋ ಪ್ರಮಾಣ ನೀರು ಕುಡಿದವರಲ್ಲಿ ಶೇಕಡಾ.8ರಷ್ಟು ಕಡಿಮೆ ಆಗಿದ್ರೆ ಪಾನೀಯ ಕುಡಿದವರಲ್ಲಿ ಶೇಕಡಾ.75ರಷ್ಟು ಕಡಿಮೆ ಆಗಿತ್ತು. ಅಲ್ಲದೇ, ಕೀಲು ನೋವು ಬರುವ ಅಂಶವು ಸಹ ಈ ಸಾಫ್ಟ್ ಡ್ರಿಂಕ್ಸ್ ಸೇವಿಸಿದವರಲ್ಲೇ ಹೆಚ್ಚಾಗಿ ಕಾಣಿಸಿದೆ. ಹೀಗಾಗಿ ವರ್ಕೌಟ್​ ನಂತರ ಸಾಫ್ಟ್​ ಡ್ರಿಂಕ್ಸ್​ ಕುಡಿಯುವುದು ಆರೋಗ್ಯವನ್ನ ಹಾಳುಮಾಡುತ್ತೆ.