ಶಾರ್ಟ್ ಸರ್ಕ್ಯೂಟ್​ನಿಂದ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

ಮಂಗಳೂರು: ರಸ್ತೆಯಲ್ಲಿ ನಿಂತಿದ್ದ ಕಾರೊಂದು ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿ ಉರಿದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ರಾತ್ರಿ 9.40ರ ಸುಮಾರಿಗೆ ಮಂಗಳೂರಿನ ಕಾವೂರಿನಲ್ಲಿ ಐ20 ಹುಂಡೈ ಕಾರನ್ನು ನಿಲ್ಲಿಸಿ, ಅದರಲ್ಲಿದ್ದವರು ಅಂಗಡಿಯೊಂದಕ್ಕೆ ಖರೀದಿಗೆ ಹೋಗಿದ್ದರು. ಇದ್ದಕ್ಕಿದ್ದಂತೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ನೋಡ ನೋಡುತ್ತಿದ್ದಂತೆ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಸೇರಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಬಜ್ಪೆ ನಿವಾಸಿ ಜಯರಾಜ್ ಎಂಬವರಿಗೆ ಈ ಕಾರು ಸೇರಿದ್ದಾಗಿದ್ದು, ಮಂಗಳೂರಿಗೆ ಆಗಮಿಸಿದ್ದ ಅವರು ಬಜ್ಪೆಗೆ ಹಿಂತಿರುಗುವ ದಾರಿಯಲ್ಲಿ ಅವಘಡ ಸಂಭವಿಸಿದೆ.