ಚುನಾವಣೆ ಮುಗಿದು 5ತಿಂಗಳು ಆದ್ರೂ ಬಾಡಿಗೆ ಕೊಟ್ಟಿಲ್ಲ, ಜೀಪ್​ ಕೆಳಗೇ ಮಲಗಿ ಪ್ರತಿಭಟನೆ

ಚಾಮರಾಜನಗರ: ವಾಹನ ಬಾಡಿಗೆ ಹಣ ನೀಡುವಂತೆ ಆಗ್ರಹಿಸಿ ಕಾರು ಮಾಲೀಕ ತಹಶೀಲ್ದಾರ್ ವಾಹನದ ಕೆಳಗೆ ಮಲಗಿ ಪ್ರತಿಭಟನೆ ನಡೆಸಿದ ಪ್ರಸಂಗ ಜಿಲ್ಲೆಯ ಯಳಂದೂರು ತಾಲೂಕು ಕಚೇರಿ ಎದುರು ನಡೆದಿದೆ.

ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ತಾಲೂಕು ಆಡಳಿತ ಚುನಾವಣಾ ಕರ್ತವ್ಯಕ್ಕೆಂದು ಚಾಮರಾಜನಗರದ ಮಹೇಶ್​ಗೆ ಸೇರಿದ ಕಾರು ಬಾಡಿಗೆ ಪಡೆದಿತ್ತು. ಅದರ ಬಾಡಿಗೆ ಹಣ ₹ 45 ಸಾವಿರ ಆಗಿದೆಯಂತೆ.

ಚುನಾವಣೆ ಮುಗಿದು 5 ತಿಂಗಳು ಕಳೆದರೂ ಬಾಡಿಗೆ ಹಣ ನೀಡದ ಹಿನ್ನೆಲೆಯಲ್ಲಿ ಬೇಸತ್ತ ಕಾರು ಮಾಲೀಕ, ಇಂದು ತನ್ನ ಇಬ್ಬರು ಮಕ್ಕಳೊಂದಿಗೆ ಜಿಲ್ಲೆಯ ಯಳಂದೂರು ತಾಲೂಕು ಕಚೇರಿಗೆ ಆಗಮಿಸಿದ್ದರು. ಈ ವೇಳೆ ತಮಗೆ ಬಾಡಿಗೆ ಹಣ ನೀಡಬೇಕು ಎಂದು ಒತ್ತಾಯಿಸಿ ಕಚೇರಿ ಎದುರು ತಹಶೀಲ್ದಾರ್ ಕಾರಿಗೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv