ನಿಯಂತ್ರಣ ತಪ್ಪಿ ಪ್ರವಾಸಿಗರ ಕಾರು ಪಲ್ಟಿ

ಚಿಕ್ಕಮಗಳೂರು: ನಿಯಂತ್ರಣ ತಪ್ಪಿ ನೆಲಮಂಗಲ ಮೂಲದ ಪ್ರವಾಸಿಗರ ಕಾರು ಪಲ್ಟಿಯಾದ ಘಟನೆ, ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಕ್ವಾಟ್ರಾಸ್ ಬಳಿ ನಿನ್ನೆ ತಡ ರಾತ್ರಿ ನಡೆದಿದೆ.
ಅದೃಷ್ಟವಶಾತ್​ ಕಾರಿನಲ್ಲಿದ್ದ ನಾಲ್ವರು ಪ್ರವಾಸಿಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ನೆಲಮಂಗಲದಿಂದ ಹೊರನಾಡಿಗೆ ಪ್ರವಾಸಿರು ಹೋಗುತ್ತಿದ್ದ ವೇಳೆ, ಕೊಟ್ಟಿಗೆಹಾರ – ಹೊರನಾಡು ರಸ್ತೆಯ ಪೊಲೀಸ್ ಕ್ವಾಟ್ರಾಸ್ ಕ್ರಾಸ್ ಬಳಿ, ರಸ್ತೆ ತಿರುವಿನ ಬ್ರಿಡ್ಜ್ ಸಮೀಪದ ಗುಂಡಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv