ಮರಕ್ಕೆ ಕಾರು ಡಿಕ್ಕಿ: ಅಪ್ಪ, ಮಗಳು ಸಾವು

ಚಿತ್ರದುರ್ಗ: ದಾವಣಗೆರೆಯಿಂದ ಹೊಸದುರ್ಗಕ್ಕೆ ಬರುತ್ತಿದ್ದ ವೇಳೆ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಅಪ್ಪ, ಮಗಳು ಮೃತಪಟ್ಟಿರುವ ಘಟನೆ ತಡರಾತ್ರಿ ಹೊಳಲ್ಕೆರೆ ಸಮೀಪದ ಎನ್​​.ಜಿ. ಹಳ್ಳಿ ಗೇಟ್​​ ಬಳಿ ನಡೆದಿದೆ.
ಮೃತರನ್ನು ಜವಳಿ ಉದ್ಯಮಿ ಮಂಜುನಾಥ್​​(40), ಪುತ್ರಿ ರಾಜೇಶ್ವರಿ(1) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ದಾವಣಗೆರೆಯಿಂದ ಹೊಸದುರ್ಗಕ್ಕೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಕಾರು ಮರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಇನ್ನು ಘಟನೆಯಲ್ಲಿ ಕಾರಿನಲ್ಲಿದ್ದ ಮಂಜುನಾಥ್​​ರ ಪತ್ನಿ ಶಿಲ್ಪಾ, ಪುತ್ರಿಯರಾದ ಶಾರದ, ಸಾನ್ವಿತ ಹಾಗೂ ಸ್ನೇಹಿತ ರಂಗನಾಥ್​​ ಗಾಯಗೊಂಡಿದ್ದರು. ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ಕುರಿತು ಹೊಳಲ್ಕೆರೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv