ಕಾರು ಪಲ್ಟಿ, ಇಬ್ಬರು ಸಾವು, ಐವರಿಗೆ ಗಾಯ

ಕೋಲಾರ: ಮದುವೆ ಮುಗಿಸಿಕೊಂಡು ವಾಪಸ್ಸಾಗುವ ವೇಳೆ ಎರ್ಟಿಗಾ ಕಾರು ಪಲ್ಟಿಯಾಗಿ ಇಬ್ಬರು ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಕೋಲಾರ ಹೊರವಲಯದ ಟಮಕಾ ಬಳಿ ತಡರಾತ್ರಿ ನಡೆದಿದೆ.
ಕೋಲಾರದಲ್ಲಿ ಮದುವೆ ಮುಗಿಸಿಕೊಂಡು ಬರುತ್ತಿದ್ದ ವೇಳೆ ಕಾರು ಪಲ್ಟಿಯಾಗಿದೆ. ಮುಳಬಾಗಿಲು ತಾಲೂಕಿನ ಬೆಸ್ತರಹಳ್ಳಿ ಗ್ರಾಮದ ಕೇದಾರ್​(35), ಶಿವಶಂಕರ್​​(41) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ 5 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆರ್​.ಎಲ್​. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv