ಕಾರು ಅಪಘಾತ: ವಿಡಿಯೋ ಮೂಲಕ ಸಿ.ಟಿ. ರವಿ ಸ್ಪಷ್ಟನೆ

ಬೆಂಗಳೂರು: ತುಮಕೂರಿನಲ್ಲಿ ನಡೆದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿ.ಟಿ. ರವಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ರಾತ್ರಿ ಕುಣಿಗಲ್ ಹತ್ತಿರ ನಡೆದ ಕಾರು ಅಪಘಾತ ದುರಾದೃಷ್ಟಕರ. ನಾನು ಚೆನ್ನೈಗೆ ಹೋಗಬೇಕಿತ್ತು. ಆದ್ದರಿಂದ ನಿನ್ನೆ ರಾತ್ರಿ 11.30ಕ್ಕೆ ಚಿಕ್ಕಮಗಳೂರಿನಿಂದ ಹೊರಟೆ. ಮಧ್ಯದಲ್ಲಿ ನಾನು ನಿದ್ದೆ ಮಾಡ್ತಾ ಇದ್ದೆ. ಆಗ ನನ್ನ ಡ್ರೈವರ್​ ಆಕಾಶ್​​​ ಅಂತಾ, ಅವನು ಕಾರು ಡ್ರೈವ್​ ಮಾಡ್ತಾ ಇದ್ದ ಎಂದು ಸಿ.ಟಿ ರವಿ ಹೇಳಿದ್ದಾರೆ.

“ಕಾರಲ್ಲಿ ನಾನು, ಡ್ರೈವರ್​​ ಆಕಾಶ್, ಗನ್​ ಮ್ಯಾನ್​​ ರಾಜಾ ನಾಯಕ್​​ ಒಟ್ಟು ಮೂರು ಜನ ಪ್ರಯಾಣ ಮಾಡ್ತಾ ಇದ್ದೆವು. ಏರ್​ ಬ್ಯಾಗ್​ ಓಪನ್​ ಆಗಿ ಕಾರು ನಿಂತ ಮೇಲೆ ನನಗೆ ಎಚ್ಚರವಾಗಿದ್ದು. ಆಮೇಲೆ ಕಾರಿಗೆ ಏನೋ ಆಗಿದೆ ಅಂತಾ ಅನಿಸಿತು. ಅದುವರೆಗೂ ಏನ್​ ಆಗಿದೆ ಅಂತಾ ಗೊತ್ತಿರಲಿಲ್ಲ. ತಕ್ಷಣ ನಾನು ಎದ್ದೆ, ಅಷ್ಟರಲಿ ನನಗೆ ಎದೆ ನೋವು ಉಂಟಾಯ್ತು ಹಾಗೂ ಮೈಕೈ ತರಚಿತು ಗಾಯಗಳಾಗಿದ್ದವು . ತಕ್ಷಣ ನೋಡಿದೆ ಇಬ್ಬರು ನಿಧನರಾಗಿದ್ದರು. ನಾನೇ ಸ್ವತಃ ಆ್ಯಂಬುಲೆನ್ಸ್​​ಗೆ ಫೋನ್​ ಮಾಡಿದೆ. ಮೂರು-ನಾಲ್ಕು ಬಾರಿ ಬೇರೆ ಬೇರೆ ರೀತಿ ಫೋನ್​ ಮಾಡಿ ಪೊಲೀಸ್​​ಗೆ ಕಾಂಟ್ಯಾಕ್ಟ್​​​ ಮಾಡಿದೆ. ಪೊಲೀಸ್​ ಸಬ್​ ಇನ್ಸ್​​​​ಪೆಕ್ಟರ್ ಹಾಗೂ ಆ್ಯಂಬುಲೆನ್ಸ್ ಬಂದ ನಂತರ ಗಾಯಾಳುಗಳನ್ನ ಮತ್ತು ಮೃತರನ್ನ ಸ್ಥಳಾಂತರಿಸಿದೆ. ನಂತರ ನಾನು ಸಬ್​ ಇನ್ಸ್​​​​ಪೆಕ್ಟರ್​ಗೆ ಹೇಳಿ ಬಂದು ವಿಕ್ರಮ್​​ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ರೆಸ್ಟ್​ನಲ್ಲಿ ಇದ್ದೇನೆ. ನಾನು ಈಗ ಚೆನ್ನೈಗೆ ಹೋಗುವ ಕಾರ್ಯಕ್ರಮವನ್ನ ಕ್ಯಾನ್ಸಲ್​​​​​ ಮಾಡಿ ಇಲ್ಲೇ ಉಳಿದುಕೊಂಡಿದ್ದೇನೆ. ಇದಾದ ನಂತರ ನಾನು ಮೃತರ ಕುಟುಂಬವನ್ನ ಭೇಟಿ ಮಾಡುತ್ತೇನೆ. ಈ ಅಪಘಾತ ದುರಾದೃಷ್ಟಕರ. ಇದರ ಬಗ್ಗೆ ಇನ್ನೇನೂ ಹೇಳಲಿಕ್ಕೆ ಬಯಸುವುದಿಲ್ಲ. ಮೃತರ ಕುಟುಂಬಕ್ಕ ದುಃಖ ಭರಿಸುವ ಶಕ್ತಿ ಆ ಭಗವಂತ ಕೂಡಲಿ ಅಂತಾ ಅಷ್ಟೇ ಕೇಳುತ್ತೇನೆ. ನನಗೆ ಅವರ ಕುಟುಂಬದವರ ನೋವು ಅರ್ಥ ಆಗುತ್ತೆ. ಯಾರೂ ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಅನ್ನೋದನ್ನಷ್ಟೇ ನಾನು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ” – ಸಿ.ಟಿ ರವಿ


Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv