ಕಾರು ಪಲ್ಟಿ, ಕಾರಿನಲ್ಲಿದ್ದ ನಾಲ್ವರೂ ಪಾರು

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಘಟನೆ ಬಾಳೆಹೊನ್ನೂರಿನ ಕೂಳೂರಿನಲ್ಲಿ ನಡೆದಿದೆ. ಶೃಂಗೇರಿಯಿಂದ ಬಾಳೆಹೊನ್ನೂರು ಕಡೆಗೆ ಬರುತ್ತಿದ್ದ ಕಾರು ಪಲ್ಟಿ ಹೊಡೆದಿದೆ. ಚರಂಡಿಗೆ ಬಿದ್ದ ಕಾರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನಲ್ಲಿದ್ದವರು ಮಂಗಳೂರು ಮೂಲದವರು ಎನ್ನಲಾಗಿದೆ. ಈ ಸಂಬಂಧ ಜೈಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv