ಸ್ನೇಹಿತನ ಮದ್ವೆಗೆ ಹೋದ ಮೂವರು ಅಪಘಾತದಲ್ಲಿ ದುರ್ಮರಣ

ತುಮಕೂರು: ಲಾರಿ ಮತ್ತು ಕಾರು ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಬಳಿ ನಡೆದಿದೆ. ಮೃತರನ್ನು ಚಿತ್ರದುರ್ಗದ ವಿನಯ್​​ (22), ಶಿರಾದ ಬರಗೂರಿನ ತಿಪ್ಪೇಸ್ವಾಮಿ(40), ಬೆಂಗಳೂರಿನ ಅರವಿಂದ್​​ (32) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಬೆಂಗಳೂರಿನ ಬಾಸ್ಕೋ ಕಂಪೆನಿಯಲ್ಲಿ ಟೆಕ್ನೀಶಿಯನ್ಸ್​​ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಶಿವಮೊಗ್ಗದಲ್ಲಿ ನಡೆದ ಸ್ನೇಹಿತನ ವಿವಾಹ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಕೆ.ಬಿ.ಕ್ರಾಸ್​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.