ಬಿಜೆಪಿ ಪಕ್ಷ ಮಠದ ಪರ ನಿಂತಿದೆ: ಅಭ್ಯರ್ಥಿ ರಘುಪತಿ ಭಟ್

ಉಡುಪಿ: ಕಗ್ಗಂಟಾಗಿದ್ದ ಕ್ಷೇತ್ರ ಉಡುಪಿಯಲ್ಲಿ ಕೊನೆಗೂ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ರಘುಪತಿ ಭಟ್ ಸಫಲರಾಗಿದ್ದರೆ. ಈ ನಡುವೆ ಶಿರೂರು ಸ್ವಾಮೀಜಿ ಚುನಾವಣಾ ಕಣಕ್ಕಿಳಿದಿರುವುದು ಬಿಜೆಪಿಗೆ ಅತಂಕವನ್ನುಂಟು ಮಾಡಿದೆ. ಹೀಗಾಗಿ ಅಭ್ಯರ್ಥಿ ರಘುಪತಿ ಭಟ್, ಶಿರೂರು ಶ್ರೀಗಳ ಮನವೊಲಿಸಲು ಮುಂದಾಗಿದ್ದಾರೆ.
ಉಡುಪಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ರಘುಪತಿ ಭಟ್, ಚುನಾವಣೆ ಮುನ್ನ ಶಿರೂರು ಶ್ರೀಗಳ ಬಳಿ ತೆರಳಿ ಆಶೀರ್ವಾದ ಪಡೆಯುತ್ತೇನೆ . ಶ್ರೀಗಳು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ ಕೂಡ ಮಾಡುತ್ತೇನೆ ಎಂದಿದ್ದಾರೆ.
ಬಿಜೆಪಿ ಪಕ್ಷ ಮಠದ ಪರ ನಿಂತಿದೆ ಇದೆ. ಕನಕ ಗೋಪುರದ ವಿಚಾರದಿಂದ ಹಿಡಿದು ಮಠ ಸರ್ಕಾರೀಕರಣವಾಗುವುದನ್ನು ವಿರೋಧಿಸಿದ್ದೇವೆ. ಶ್ರೀಗಳು ಚುನಾವಣೆ ನಿಲ್ಲುವುದರಿಂದ ಪ್ರಮೋದ್ ಮಧ್ವರಾಜ್​ಗೆ ಯಾವುದೇ ಅನುಕೂಲ ಆಗಲ್ಲ. ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದರು. ಆದ್ರೆ ಈ ಬಾರಿ ಗೆಲ್ಲುವ ವಿಶ್ವಾಸ ನೂರಕ್ಕೆ ನೂರರಷ್ಟು ಇದೆ ಎಂದು ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *