ಅಂಬೇಡ್ಕರ್ ಜಯಂತಿ, ಪಕ್ಷಭೇದ ಮರೆತು ಈಶ್ವರ ಖಂಡ್ರೆ , ಭಗವಂತ ಖೂಬಾ ಡ್ಯಾನ್ಸ್​

ಬೀದರ್: ಸಂವಿಧಾನ ಶಿಲ್ಪಿ ಡಾ.ಬಿ.ಆರ್​​​​​​​​ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಬೀದರ್‌ನಲ್ಲಿ ರಾಜಕೀಯ ನಾಯಕರು ಸಖತ್ ಸ್ಟೆಪ್ ಹಾಕಿದ್ದಾರೆ. ಚುನಾವಣಾ ಗುಂಗು ಮರೆತು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಪಕ್ಷಬೇಧ ಮರೆತು ಸಖತ್ ಸ್ಟೆಪ್ ಹಾಕಿದರು. ಬೀದರ್​ ಲೋಕಸಭಾ ಕ್ಷೇತ್ರದಲ್ಲಿ ಪರಸ್ಪರ ಎದುರಾಳಿಗಳಾದ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಹಾಗೂ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಡ್ಯಾನ್ಸ್​ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಈ ವೇಳೆ ಸಚಿವ ಬಂಡೆಪ್ಪ ಖಾಶೆಂಪೂರ್, ಎಂಎಲ್‌ಸಿ ವಿಜಯ ಸಿಂಗ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಸಾಥ್ ನೀಡಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv