ಎನ್​ಪಿಎಸ್ ಯೋಜನೆ ರದ್ದು ಕೋರಿ ಉಪವಾಸ ಸತ್ಯಾಗ್ರಹ, ಶಿಕ್ಷಕಗೆ ಸಿಎಂ ಕರೆ

ಕೊಪ್ಪಳ: ಎನ್​ಪಿಎಸ್ ಯೋಜನೆಯನ್ನು ರದ್ದು ಪಡಿಸುವಂತೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಶಿಕ್ಷಕಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕರೆ ಮಾಡಿ, ಉಪವಾಸ ಕೈ ಬಿಡುವಂತೆ ಮನವಿ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿ ತಮ್ಮ ಪ್ರಣಾಳಿಕೆಯಲ್ಲಿ ಎನ್​ಪಿಎಸ್ ಯೋಜನೆ ರದ್ದು ಪಡಿಸಲು ಭರವಸೆ ನೀಡಿದ್ದರು. ಇದನ್ನು ವಿರೋಧಿಸಿ ಕೊಪ್ಪಳ‌ ಜಿಲ್ಲಾಡಳಿತ ಭವನದ ಮುಂದೆ ಕೆಎಸ್ಎನ್​ಪಿಜಿಇ ಸಂಘದ ರಾಜ್ಯ ಗೌರವ ಅಧ್ಯಕ್ಷ ಮತ್ತು ಶಿಕ್ಷಕರಾದ ಬೀರಪ್ಪ ಅಂಡಗಿ ಎಂಬುವವರು ಅಕ್ಟೋಬರ್ 9 ರಂದು ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದರು.

ಸಿಎಂ ಕುಮಾರಸ್ವಾಮಿಗೆ ಈ ವಿಷಯವನ್ನ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದರು. ಹಾಗಾಗಿ ಇಂದು ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ್ದ ಶಾಸಕ ರಾಘವೇಂದ್ರ, ಸಿಎಂ ಕುಮಾರಸ್ವಾಮಿ ಅವರಿಗೆ ಫೋನ್ ಕರೆ ಮಾಡಿ ಕೊಟ್ಟಿದ್ದರು. ಆ ವೇಳೆ ಶಿಕ್ಷಕ ಬೀರಪ್ಪ ಜೊತೆ ಮಾತನಾಡಿ ಸಿಎಂ, ವಿಶೇಷ ಕಮಿಟಿ ರಚಿಸಿ ಹಳೆ ಪಿಂಚಣಿ ಪದ್ಧತಿಯನ್ನು ಮರು ಜಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸದ್ಯ, ಶಿಕ್ಷಕ ಬೀರಪ್ಪ ಸತ್ಯಾಗ್ರಹವನ್ನು ಕೈಬಿಟ್ಟು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv