ವಿಶ್ವದ 2ನೇ ಅತೀ ಎತ್ತರ ಶಿಖರವೇರುತ್ತಿದ್ದ ಪರ್ವತಾರೋಹಿ ಸಾವು

ಇಸ್ಲಾಮಬಾದ್​: ವಿಶ್ವದ 2ನೇ ಅತಿ ಎತ್ತರದ ಪರ್ವತ ಶಿಖರ ಕೇಫ್​ ಆಫ್​ ಗುಡ್​ ಹೋಫ್​ ಅಥವಾ K2 ಎಂದು ಕರೆಯುವ ಶಿಖರವನ್ನು ಹತ್ತುವಾಗ ಜಾರಿ ಬಿದ್ದು, ಕೆನಾಡ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ.
ಕೆನಾಡದ 53 ವರ್ಷದ ಪರ್ವತಾರೋಹಿ ಮೃತಪಟ್ಟಿದ್ದಾರೆ ಅಂತ ಟ್ರಿಪ್ ಆರ್ಗನೈಸ್ ಮಾಡಿದ್ದ ಸಮಿತ್ ಕರಕೋರಂ ಸಂಸ್ಥೆಯ ಸಖಾವತ್​ ಹುಸೇನ್​ ದೃಢಪಡಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬರುವ 8,611 ಮೀಟರ್ ಎತ್ತರದ ಪರ್ವತದ 2 ಮತ್ತು 3ನೇ ಕ್ಯಾಂಪ್ ನಡುವೆ ಇದ್ದಾಗ ಈ ದುರ್ಘಟನೆ ಸಂಭವಿಸಿದೆ ಅಂತ ಗಿಲ್ಗಿಟ್-ಬಲೂಚಿಸ್ತಾನ್ ಪ್ರವಾಸೋದ್ಯಮ ಇಲಾಖೆ ಹೇಳಿದೆ.
ಚೀನಾ-ಪಾಕಿಸ್ತಾನದ ಗಡಿಯಲ್ಲಿ ಬರುವ ಕರಕೋರಾಂ ಪ್ರಾಂತ್ಯದಲ್ಲಿರುವ K2 ಪರ್ವತ ವಿಶ್ವದ 2ನೇ ಅತೀಎತ್ತರದ ಪರ್ವತ. ಇದನ್ನ ಏರುವುದು ಕೆಲವೊಮ್ಮೆ ಮೌಂಟ್ ಎವರೆಸ್ಟ್​ಗಿಂತಲೂ ಕಷ್ಟಕರ. 1954ರಲ್ಲಿ ಮೊದಲ ಬಾರಿಗೆ ಇದನ್ನ ಯಶಸ್ವಿಯಾಗಿ ಏರಲಾಗಿತ್ತು. ಅಂದಿನಿಂದ ಇಂದಿನ ತನಕ ಕೇವಲ 306 ಮಂದಿ ಮಾತ್ರ ಶಿಖರದ ತುದಿ ತಲುಪಿದ್ದಾರೆ. ಪರ್ವತ ಏರುವ ಪ್ರಯತ್ನದಲ್ಲೇ 80 ಮಂದಿ ಮೃತಪಟ್ಟಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv