ಚಿಂತೆ ಮಾಡ್ಬೇಡಿ..! ಆರ್​ಸಿಬಿಗೆ ಫ್ಲೇ ಆಫ್​ ಚಾನ್ಸ್ ಇನ್ನು ಇದೆ..!

ಈ ಬಾರಿಯ ಐಪಿಎಲ್​​ನಲ್ಲಿ ರಾಯಲ್ ಚಾಲೆಂಜರ್ಸ್​​ ಬೆಂಗಳೂರು ಹೀನಾಯ ಪ್ರದರ್ಶನ ನೀಡುತ್ತಿದೆ. ಸತತ 6 ಸೋಲುಗಳ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಿದ್ರೂ ಆರ್​ಸಿಬಿ ಫ್ಯಾನ್ಸ್ ಮಾತ್ರ ತಮ್ಮ ತಂಡದ ಮೇಲೆ ಇನ್ನು ನಂಬಿಕೆ ಕಳೆದುಕೊಂಡಿಲ್ಲ.ಮುಂದಿನ ಪಂದ್ಯಗಳಲ್ಲಿ ಆರ್​ಸಿಬಿ ಬೌನ್ಸ್ ಬ್ಯಾಕ್ ಮಾಡುತ್ತೆ, ಪ್ಲೇ ಆಫ್​ಗೆ ಎಂಟ್ರಿ ನೀಡೆ ನೀಡುತ್ತೆ ಎಂದು ಕನಸು ಕಾಣುತ್ತಿದ್ದಾರೆ.ಆದ್ರೆ ಇದು ಸಾಧ್ಯವಾಗಬೇಕಾದ್ರೆ ಉಳಿದೆಲ್ಲಾ ಪಂದ್ಯಗಳನ್ನ ಆರ್​ಸಿಬಿ ಗೆಲ್ಲಲೆಬೇಕು.ಈಗಾಗಲೇ ಆಡಿರುವ ಆರು ಪಂದ್ಯಗಳನ್ನ ಕೈ ಚೆಲ್ಲಿರುವ ಆರ್​ಸಿಬಿ, ಟೂರ್ನಿಯಲ್ಲಿ ಇನ್ನು 8 ಪಂದ್ಯಗಳನ್ನಾಡಲಿದೆ.ಈ ಎಲ್ಲಾ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಉತ್ತಮ ನೆಟ್​ ರನ್​ರೇಟ್​ನಿಂದ ಗೆಲುವಿನ ಬಾವುಟ ಹಾರಿಸಿದ್ರೆ, ಪ್ಲೇ ಆಫ್​ ಕಷ್ಟವೇನಲ್ಲ. ಒಂದು ವೇಳೆ ಆರ್​ಸಿಬಿ ಏನಾದ್ರು ಆ 8 ಪಂದ್ಯಗಳಲ್ಲಿ ಒಂದು ಮ್ಯಾಚ್​ ಸೋತ್ರೂ, ಉಳಿದ ತಂಡಗಳ ಸೋಲು-ಗೆಲುವಿನ ಮೇಲೆ ಆರ್​ಸಿಬಿಯ ಪ್ಲೇ ಆಫ್​ ನಿರ್ಧಾರವಾಗಲಿದೆ.