ಗಿನ್ನಿಸ್ ದಾಖಲೆ ಸೇರಿದ ಕಾಂಬೋಡಿಯಾ ಸ್ಕಾರ್ಫ್..!

ಕಾಂಬೋಡಿಯಾ: ವಿಶ್ವ ದಾಖಲೆ ಮಾಡೋಕೆ ಇಂಥದ್ದೇ ವಸ್ತು ಬೇಕು ಅಂತೇನಿಲ್ಲ. ಹಲವರು ತಮ್ಮ ಆಸಕ್ತಿಗಳಿಂದಲೇ ವಿಶ್ವ ದಾಖಲೆ ಮಾಡಿದ್ರೆ, ಇನ್ನು ಕೆಲವರ ಪ್ರೊಫೆಷನ್ ಕೂಡ ಗಿನ್ನಿಸ್ ರೆಕಾರ್ಡ್ ಮಾಡಿದ್ದಿದೆ. ಈಗ ಕಾಂಬೋಡಿಯಾ ದೇಶ ವಿಶಿಷ್ಠ ವಿಶ್ವ ದಾಖಲೆಯೊಂದನ್ನ ನಿರ್ಮಿಸಿದೆ.
ಸಾಮಾನ್ಯವಾಗಿ ಸ್ಕಾರ್ಫ್ ಅನ್ನ ಮನುಷ್ಯರು ಧರಿಸುತ್ತಾರೆ. ಆದ್ರೆ, ಕಾಂಬೋಡಿಯಾ ದೇಶದಲ್ಲಿ ನೇಯ್ದಿರುವ ಸ್ಕಾರ್ಫ್ ಮಾತ್ರ ಧರಿಸೋಕೆ ಕಷ್ಟ. ಆದ್ರೆ, ಅದರಿಂದ ವಿಶ್ವ ದಾಖಲೆ ಸೃಷ್ಟಿಯಾಗಿದೆ. ಈ ಸ್ಕಾರ್ಫ್​ ಎಷ್ಟು ದೊಡ್ಡದು ಎಂದರೆ ಬರೊಬ್ಬರಿ 1,100 ಮೀಟರ್​ (3,600 ಫೀಟ್​) ಉದ್ದವಿದೆ. ಇದನ್ನು ಫ್ನೋಮ್​ ಪೆನ್ಹಾ ಅರಮನೆ ಹೊರ ಭಾಗದಲ್ಲಿ ಆರು ತಿಂಗಳ ಕಾಲ 23,000 ಜನ ನೇಯಿದಿದ್ದಾರೆ. ಸ್ಕಾರ್ಫ್​ನ್ನ ಗಿನ್ನಿಸ್​ ಅಧಿಕಾರಿಯು ಅಳತೆ ಮಾಡಿದ ನಂತರ ಸಾವಿರಾರು ಯುವಕರು ಗಿನ್ನಿಸ್​ ದಾಖಲೆಗೆ ಸೇರಿದ ಸ್ಕಾರ್ಫ್​ನ್ನ ಸುತ್ತಿಟ್ಟರು. ನಂತರ ಅಲ್ಲಿ ಸೇರಿರುವ ಸಾವಿರಾರು ಜನರಿಗೆ ಇದು ಗಿನ್ನಿಸ್​ ಬುಕ್​ನ ಹೊಸ ವಿಶ್ವ ದಾಖಲೆ ಎಂದು ಗಿನ್ನಿಸ್​ ನ್ಯಾಯಧೀಶರಾದ ಸ್ವಪ್ನಿಲ್​ ದಂಗಾರಿಕಾರ್​ ಘೋಷಿಸಿದ್ರು.