₹2 ಲಕ್ಷ ಕೊಟ್ಟು ಕೇಕ್​ ಮಾಡ್ಸಿದ್ದ ದಂಪತಿಗೆ ಶಾಕ್..!

ಮಾಡರ್ನ್​ ಡೇಸ್​ನಲ್ಲಿ ಏನೇ ಸೆಲೆಬ್ರೇಷನ್​ ಇದ್ರೂ ಅದಕ್ಕೆ ಒಂದು ಕೇಕ್​ ಕಟ್​ ಮಾಡ್ತಾರೆ ಅದು ಇವಾಗ ಒಂಥರಾ ಟ್ರೆಂಡ್​ ಆಗೋಗಿದೆ. ಬರ್ತ್​ಡೇಗೆ ಕೇಕ್​, ಎಂಗೇಜ್​ಮೆಂಟ್​ಗೆ ಕೇಕ್​, ಮದುವೆಗೆ ಕೇಕ್​, ನಾಮಕರಣಕ್ಕೆ ಕೇಕ್​. ಏನೇ ಇದ್ರೂ ಒಂದು ಕೇಕ್​ ಕಟ್​ ಮಾಡ್ತಾರೆ. ಅದ್ರಲ್ಲೂ ಮದುವೆ ಅಂತ ಬಂದ್ರೆ ಕೇಕ್​ ಕಟ್​ ಈಸ್​ ಇಂಪಾರ್ಟೆಂಟ್​. ಅಂತೆಯೇ ಇಲ್ಲೊಂದು ಜೋಡಿ ತಮ್ಮ ಮದುವೆ ದಿನಕ್ಕೆ ಕೇಕ್​ ಕಟ್​ ಮಾಡ್ಬೇಕು ಅಂತ ಹೇಳಿ ಕೇಕ್​ ಆರ್ಡರ್​ ಮಾಡಿದ್ರು. ಅವರು ಆ ಕೇಕ್​ ಕಟ್​ ಮಾಡಿದಾಗ್ಲೇ ಗೊತ್ತಾಗಿದ್ದು, ಅದು ರಿಯಲ್ ಕೇಕ್ ಅಲ್ಲ, ಬೆಂಡಿನಿಂದ(ಥರ್ಮಕಾಲ್​) ರೆಡಿಯಾದ ಕೇಕ್​ ಅಂತ. ಮದುವೆ ಖುಷಿಯಲ್ಲಿದ್ದ 26 ವರ್ಷ ಕಪಲ್ಸ್, ಕೇಕ್ ಕತ್ತರಿಸೋಕೆ ಮುಂದಾದಾಗಲೇ ಗೊತ್ತಾಗಿದ್ದು, ಇಡೀ ಕೇಕ್​ ಬೆಂಡಿನಿಂದ ತಯಾರಾಗಿತ್ತು. ಅಂದಹಾಗೇ ಕೇಕ್​ ರೆಡಿ ಮಾಡಿಸೋದಕ್ಕೆ ಆ ಜೋಡಿ ಬರೋಬ್ಬರೀ 2 ಲಕ್ಷ ರೂಪಾಯಿ ಖರ್ಚು ಮಾಡಿತ್ತು.

ವಿಶೇಷ ಬರಹ: ರಕ್ಷ ಪ್ರಸಾದ್​