ಸದ್ಯದಲ್ಲಿಯೇ ಸಚಿವ ಸಂಪುಟ ವಿಸ್ತರಣೆ: ಸಚಿವ ಆರ್‌.ವಿ.ದೇಶಪಾಂಡೆ

ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗನೇ ಆಗುತ್ತೆ. ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ಸಿಗಬೇಕೆನ್ನುವುದು ನನ್ನ ಆಶಯವೂ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಹುಬ್ಬಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರ್ಹತೆ ಇದ್ದಾಗ್ಯೂ ಸಚಿವ ಸ್ಥಾನ ಸಿಗದೆ ಇದ್ದಲ್ಲಿ ಅಸಮಾಧಾನಗಳು ಇರುವುದು ಸಹಜ. ಆದ್ರೆ ಶಾಸಕರಿಗೆ ಯಾವುದೇ ಅಸಮಾಧಾನ ಉಂಟಾಗದಂತೆ, ಹೈಕಮಾಂಡ್ ನಿರ್ಧಾರದಂತೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸರ್ಕಾರ ₹130 ಕೋಟಿಗೂ ಅಧಿಕ ಪಿಂಚಣಿ ಹಣ ಬಾಕಿ ಉಳಿಸಿಕೊಂಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಹಳೆಯ ಸಮಸ್ಯೆ ನಾನು ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ಧಾರವಾಡದ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳನ್ನು ಮಾಡಲಾಗಿದೆ. ಯಾವ ಸಮಯದಲ್ಲಿ ಏನು ಕೆಲಸ ಆಗಬೇಕೋ ಅದು ಆಗಬೇಕು. ಅವು ಆಗದೇ ಇದ್ದರೆ ಏನೂ ಮಾಡಲಾಗುವುದಿಲ್ಲ ಎಂದು ಪಾಲಿಕೆಗೆ ಬರಬೇಕಾದ ಪಿಂಚಣಿ ಹಣ ಬಾಕಿ ವಿಚಾರದ ಕುರಿತು ಅವರು ಕೈಚೆಲ್ಲಿದಂತೆ ಮಾತನಾಡಿದರು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ:contact@firstnews.tv