ಮಾಜಿ ಸಿಎಂ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ ಹಾಲಿ ಸಿಎಂ

ಬಾಗಲಕೋಟೆ: ಬಾದಾಮಿ ಕ್ಷೇತ್ರದ ಹಿರೆಕೆರೆ, ಗಂಜಿಕೆರೆ, ಪರ್ವತಿಕೆರೆ ತುಂಬಿಸುವ ಯೋಜನೆ ಹಾಗೂ ಗುಳೇದಗುಡ್ಡ ಪಟ್ಟಣದಲ್ಲಿ ಜವಳಿ ಪಾರ್ಕ್,ಪವರ್ ಲೂಮ್,ಗಾರ್ಮೆಂಟ್ಸ್ ಸ್ಥಾಪನೆಗೆ ಅನುದಾನ ಕುರಿತು ಮಾಜಿ ಸಿಎಂ, ಬಾದಾಮಿಯ ಹಾಲಿ ಶಾಸಕ ಸಿದ್ದರಾಮಯ್ಯನವರು ಸಿಎಂ ಹೆಚ್ ಡಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದರು.
ಸಿದ್ದರಾಮಯ್ಯ ಬರೆದಿದ್ದ ಎರಡೂ ಪತ್ರಕ್ಕೆ ಸ್ಪಂದಿಸಿರುವ ಸಿಎಂ ಕುಮಾರಸ್ವಾಮಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗೆ ಸೂಚನಾ ಪತ್ರ ನೀಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯನವರ ಪ್ರಸ್ತಾವನೆಯನ್ನು ವಿವರಗಳೊಂದಿಗೆ ಕೂಡಲೆ ಮಂಡಿಸುವಂತೆ ಸೂಚನಾ ಪತ್ರ ಬರೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv