ಪೈಲ್ವಾನ್​​ರು ತೊಡೆ ತಟ್ಟಿದರು, ಸಿಎಂ ಅವರ ಬೆನ್ನು ತಟ್ಟಿದರು..!

ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ದಸರಾ ನಾಡಕುಸ್ತಿ ಕಾರ್ಯಕ್ರಮಕ್ಕೆ ಪೈಲ್ವಾನ್​ಗಳ ಬೆನ್ನು ತಟ್ಟುವ ಮೂಲಕ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು.

ನಗರದ ದೇವರಾಜ ಅರಸು ಕುಸ್ತಿ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ನಡೆಯುತ್ತಿದೆ. ಇಂದಿನಿಂದ 6 ದಿನಗಳ ಕಾಲ ಕುಸ್ತಿ ಪಂದ್ಯಾವಳಿಗಳು ನಡೆಯಲಿದ್ದು, ಪ್ರತಿದಿನ ಅಖಾಡದಲ್ಲಿ 30 ಕುಸ್ತಿ ಪಟುಗಳು ಸೆಣಸಲಿದ್ದಾರೆ. ಅಲ್ಲದೇ, ಇದೇ ಮೊದಲ ಬಾರಿಗೆ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಪುರುಷ ಹಾಗೂ ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಗದೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಇದಕ್ಕೂ ಮೊದಲು ಶ್ರೀರಂಗಪಟ್ಟಣದ ಪೈಲ್ವಾನ್ ಶ್ರೀಕಂಠ್ ಅವರು ಕ್ರೀಡಾ ಜ್ಯೋತಿ ಹಿಡಿದು ಆಖಾಡದಲ್ಲಿ ಪ್ರದಕ್ಷಿಣೆ ಹಾಕಿದ್ರು.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv