ಶಿರಾ ಕ್ಷೇತ್ರಕ್ಕೆ ಬೈಎಲೆಕ್ಷನ್..!

ತುಮಕೂರು: ‘ಡೋಂಟ್ ವರಿ ಮೈ ಬ್ರದರ್ಸ್, ಏಪ್ರಿಲ್​ 2019ಕ್ಕೆ ಸಿರಾ ಕ್ಷೇತ್ರದಲ್ಲಿ ಬೈ ಎಲೆಕ್ಷನ್ ನಡೆಯಲಿದೆ’ ಅಂತಾ ವಾಟ್ಸ್​ ಆಪ್ ಮೆಸೇಜ್​ ಒಂದು ಹರಿದಾಡುತ್ತಿದೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಹೆಸರಿನ ವಾಟ್ಸ್ ಆಪ್​ ಮೆಸೇಜ್ ಇದಾಗಿದ್ದು, ಟಿಬಿಜೆ ಅಭಿಮಾನಿ‌ ಬಳಗ ವಾಟ್ಸಪ್ ಗ್ರೂಪ್‌ನಲ್ಲಿ ಇದು ಹರಿದಾಡುತ್ತಿದೆ. ಮೆಸೇಜ್​ ನಲ್ಲಿ ಸಂತೋಷ್ ಜಯಚಂದ್ರ ‘ಡೋಂಟ್ ವರಿ ಮೈ ಬ್ರದರ್ಸ್, ಏಪ್ರಿಲ್​ 2019ಕ್ಕೆ ಸಿರಾ ಕ್ಷೇತ್ರದಲ್ಲಿ ಬೈ ಎಲೆಕ್ಷನ್ ನಡೆಯಲಿದೆ. ಯುದ್ಧ ಗೆಲ್ಲಲು ಸಿದ್ಧರಾಗಿ’ ಎಂದು ಕಾರ್ಯಕರ್ತರಿಗೆ ಮೆಸೇಜ್​ ಮಾಡಿದ್ದಾರೆ. ಈಗ ಈ ಮೆಸೇಜ್​ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv