ಸಂಪೂರ್ಣ ಫಲಿತಾಂಶಕ್ಕೂ ಮೊದಲೇ ಸಂಭ್ರಮಿಸಿದ ಜೆಡಿಎಸ್​ ಕಾರ್ಯಕರ್ತರು

ರಾಮನಗರ: ವಿಧಾನಸಭಾ ಉಪಚುನಾವಣಾ ಸಂಪೂರ್ಣ ಫಲಿತಾಂಶ ಹೊರಬೀಳುವ ಮೊದಲೇ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ರಾಮನಗರ ಅಭ್ಯರ್ಥಿಯಾಗಿ ಕಣದಲ್ಲಿರುವ ಅನಿತಾ ಕುಮಾರಸ್ವಾಮಿ ಭಾರೀ ಮುನ್ನಡೆಯಲ್ಲಿದ್ದು, ಗೆಲುವು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ  ಮತ ಎಣಿಕಾ ಕೇಂದ್ರದ ಎದುರು ಜೆಡಿಎಸ್​ ಕಾರ್ಯಕರ್ತರು ಫಲಿತಾಂಶಕ್ಕೂ ಮೊದಲೇ ಸಂಭ್ರಮಿಸಿದ್ದಾರೆ. ಪರಸ್ಪರ ಬಣ್ಣ ಎರಚಿಕೊಂಡು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು ಜೆಡಿಎಸ್​ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv