ಬಸ್‌ ತಡೆದು ನಿಲ್ಲಿಸಿದ್ರು! ಚಾಲಕರಿಗೆ ಹೂವಿನ ಹಾರ ಹಾಕಿದ್ರು! ಏಕೆ?

ನೆಲಮಂಗಲ: ನೆಲಮಂಗಲದಲ್ಲಿ ಇಂದು ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನ ತಡೆದು ಪ್ರತಿಭಟನೆ ನಡೆಸಿದ್ದಾರೆ. ಫ್ಲೈ ಓವರ್ ಮೇಲೆ ತೆರಳುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಚಾಲಕ ಮತ್ತು ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ವಿಸ್ ರಸ್ತೆ ಮೇಲೆ ಬಸ್‌ಗಳು ತೆರಳದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಜನ, ಬಸ್ ಚಾಲಕರಿಗೆ ಹೂವಿನ ಮಾಲೆ ಹಾಕಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ರು. ನೆಲಮಂಗಲ ಬಳಿ ಸರ್ವೀಸ್ ರಸ್ತೆಯಲ್ಲಿ ತೆರಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದರೂ, ಪಾಲಿಸದೆ ಚಾಲಕರು ಫ್ಲೈ ಓವರ್ ಮೇಲೆ ತೆರಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಫ್ಲೈ ಓವರ್ ಮೇಲೆ ಬಸ್‌ಗಳನ್ನು ನಿಲ್ಲಿಸುವ ಕಾರಣದಿಂದ ರಸ್ತೆ ದಾಟಲು ತೊಂದರೆಯಾಗುತ್ತಿದೆ ಅನ್ನೋದು ಪ್ರಯಾಣಿಕರ ಅಳಲು. ಪ್ರತಿಭಟನೆ ಹಿನ್ನೆಲೆ ಬಸ್ ಪ್ರಯಾಣಿಕರಿಗೆ ಕೆಲಕಾಲ ತೊಂದರೆ ಉಂಟಾಗಿತ್ತು.

Leave a Reply

Your email address will not be published. Required fields are marked *