ಕ್ಲೀನರ್ ಬೇಜವಾಬ್ದಾರಿತನಕ್ಕೆ ಪ್ರಯಾಣಿಕರ ಆಕ್ರೋಶ

ಮಡಿಕೇರಿ: ಚಾಲನೆ ಗೊತ್ತಿಲ್ಲದೆ ಲಾರಿ ಓಡಿಸುವಾಗ ಕೆಎಸ್ಆರ್ಟಿಸಿ ಬಸ್ ಗೆ ಲಾರಿ ಡಿಕ್ಕಿ ಹೊಡೆಸಿದ ಕ್ಲೀನರ್ ಹುಡುಗನಿಗೆ ಸರ್ಕಾರಿ ಬಸ್ ಡ್ರೈವರ್, ಕಂಡಕ್ಟರ್ ಧರ್ಮದೇಟು ನೀಡಿದ್ದಾರೆ. ಅಪಘಾತದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಮಡಿಕೇರಿ ಹೊರವಲಯದ ಚೈನ್ ಗೇಟ್ ಬಳಿ ಬಸ್ ಗೆ ಲಾರಿ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.
ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಲಾರಿ ಡ್ರೈವರ್, ವಾಹನದ ಕ್ಲೀನರ್ ರಾಜು ಗೆ ಲಾರಿ ಓಡಿಸಲು ಅವಾಕಾಶ ಕೊಟ್ಟಿದ್ದರು. ಮಾರ್ಗದಲ್ಲಿ ರಸ್ತೆಯ ಕಡು ತಿರುವಿನಲ್ಲಿ ಕ್ಲೀನರ್ ಲಾರಿ ಚಲಾಯಿಸುವಾಗ, ಅದೇ ಮಾರ್ಗದಲ್ಲಿ ಹಾಸನದಿಂದ ಮಡಿಕೇರಿಗೆ ತೆರಳುತ್ತಿದ್ದ ಬಸ್ಸಿನ ಮುಂಭಾಗಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಕ್ಲೀನರ್​ ಬೇಜವಾಬ್ದಾರಿಯ ವಾಹನ ಚಾಲನೆಯಿಂದ ಕೋಪಗೊಂಡ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಸೇರಿಕೊಂಡು ಕ್ಲೀನರ್ ರಾಜುಗೆ ಥಳಿಸಿದ್ದಾರೆ. ಸ್ವಲ್ಪದರಲ್ಲೆ ಅಪಘಾತ ಸಂಭವಿಸಬಹುದಾಗಿದ್ದ ಕಾರಣ ಕ್ಲೀನರ್ ಬೇಜವಾಬ್ದಾರಿತನಕ್ಕೆ ಪ್ರಯಾಣಿಕರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv