ಬೈಕ್, ಬಸ್​ ಮುಖಾಮುಖಿ ಡಿಕ್ಕಿ: ಬೈಕ್​ ಸವಾರ ಸ್ಥಳದಲ್ಲೇ ಸಾವು

ಉಡುಪಿ: ಫೇಸ್​ಬುಕ್​ ಪ್ರೇಮಿಗಳಿಬ್ಬರು ತಿರುಪತಿಗೆ ತೆರಳಲುತ್ತಿದ್ದ ವೇಳೆ ಬೈಕ್​ ಮತ್ತು ಬಸ್​ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿಯ ಕುಂದಾಪುರದ ಮಾಸ್ತಿ ಕಟ್ಟೆ ಬಳಿ ನಡೆದಿದೆ.

ಪ್ರಸನ್ನ ಶೆಟ್ಟಿ (26) ಅರ್ಪಿತಾ ಶೆಟ್ಟಿ (23) ಅಪಘಾತಕ್ಕೆ ಈಡಾದವರು. ಪ್ರಸನ್ನ ಶೆಟ್ಟಿ ಕುಂದಾಪುರದ ಇಡೂರು ಮೂಲದ ಯುವಕನಾಗಿದ್ದು, ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಅಣ್ಣನನ್ನು ನೋಡಲು ಪ್ರಸನ್ನ ಊರಿಗೆ ಬಂದಿದ್ದರು. ಇನ್ನೂ ಗಾಯಗೊಂಡ ಅರ್ಪಿತಾ ಕುಂದಾಪುರದ ಬಂಡರ್ಕ್ಸ್ ಕಾಲೇಜು ವಿಧ್ಯಾರ್ಥಿನಿಯಾಗಿದ್ದು, ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಅಮವಾಸೆ ಬೈಲು ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.