ಬೆಂಕಿ ತಗುಲಿದ್ದು ಹಕ್ಕಿಗೆ, ನಾಶವಾಗಿದ್ದು 17 ಎಕರೆ ಭೂಮಿ

ಜರ್ಮನಿ: ವಿದ್ಯುತ್ ಕಂಬದ ಮೇಲೆ ಕುಳಿತಿದ್ದ ಹಕ್ಕಿ ಶಾರ್ಟ್ ಸರ್ಕ್ಯೂಟ್​ನಿಂದ ಕೆಳಗೆ ಬಿದ್ದಿದೆ. ಆದ್ರೆ, ಇದು ಭಾರೀ ಅನಾಹುತಕ್ಕೆ ಕಾರಣವಾಗಿದೆ.
ಜರ್ಮನಿಯ ಕರಾವಳಿ ನಗರಿ ರಾಸ್ಟಾಕ್​ನಲ್ಲಿ ಬೆಂಕಿ ತಗುಲಿದ ಹಕ್ಕಿ ಒಣ ಭೂಮಿ ಮೇಲೆ ಬಿದ್ದಿದ್ದಷ್ಟೇ, ಬೆಂಕಿ ಕಿಡಿ ಹೊತ್ತಿಕೊಂಡಿದ್ದು ನೋಡ ನೋಡುತ್ತಿದ್ದಂತೆ ಜ್ವಾಲೆಯಾಗಿ ಧಗಧಗನೆ ಹೊತ್ತಿ ಉರಿದಿದೆ. ಸುಮಾರು 17 ಎಕರೆಯಷ್ಟು ಭೂಮಿ ಬೆಂಕಿಯಲ್ಲಿ ಬೆಂದಿದೆ. ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ಯತ್ನಿಸಿದ್ರೂ, ಬೆಂಕಿ ವ್ಯಾಪಿಸಿದ ಪ್ರದೇಶ ಹೆಚ್ಚಾಗಿದ್ದಿದ್ದರಿಂದ ಬೆಂಕಿ ನಿಯಂತ್ರಣ ಕಷ್ಟವಾಗಿತ್ತು. ಕಡೆಗೆ 50 ಅಗ್ನಿ ಶಾಮಕ ಸಿಬ್ಬಂದಿ, 7 ಅಗ್ನಿಶಾಮಕ ವಾಹನಗಳು ಹಾಗೂ 1 ಹೆಲಿಕಾಪ್ಟರ್ ನೆರವಿನಿಂದ ಬೆಂಕಿಯನ್ನ ನಂದಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv