ಕೆಮಿಕಲ್‌ ಕಂಪನಿಯಲ್ಲಿ ಅಗ್ನಿ ರುದ್ರನರ್ತನ: 2 ಕೋಟಿಗೂ ಅಧಿಕ ನಷ್ಟ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್​ಪೇಟೆಯ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್​ ಕಂಪನಿಯಲ್ಲಿ ಉಂಟಾದ ಅಗ್ನಿ ಆಕಸ್ಮಿಕದಲ್ಲಿ 2 ಕೋಟಿಗೂ ಅಧಿಕ ಬೆಲೆ ಬಾಳುವ ಉಪಕರಣಗಳು ಹಾನಿಯಾಗಿವೆ. ಕಳೆದ ರಾತ್ರಿ ಸುಮಾರು 10:15ರ ಸಮಯದಲ್ಲಿ ಈ ಘಟನೆ ನಡೆದಿದೆ. ನವೀನ್​ ಎಂಬುವರಿಗೆ ಸೇರಿದ ಲಿಯೋನಿಡ್​ ಲ್ಯಾಬೊರೇಟರಿ ಪ್ರೈವೇಟ್​ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿನಂದಿಸಲು ಹರಸಾಹಸ ಪಟ್ಟರು.

Leave a Reply

Your email address will not be published. Required fields are marked *