ನಾಳಿನ ಬಂದ್​ಗೆ ಭಗತ್ ಸಿಂಗ್ ಗೆಳೆಯರ ಬಳಗ ವಿರೋಧ

ರಾಮನಗರ: ಕೇಂದ್ರ ಸರ್ಕಾರದ ಪೆಟ್ರೋಲ್​​, ಡಿಸೇಲ್​​ ಬೆಲೆ ಏರಿಕೆ ಖಂಡಿಸಿ ದೇಶದ್ಯಾಂತ ನಾಳೆ ಕಾಂಗ್ರೆಸ್ ಭಾರತ್​ ಬಂದ್​ಗೆ ಕರೆ ಕೊಟ್ಟಿದೆ. ಇದನ್ನು ಖಂಡಿಸಿ ಇಂದು ಭಗತ್ ಸಿಂಗ್ ಗೆಳೆಯರ ಬಳಗದ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ರು. ಬಂದ್ ನಿಂದ ಜನ ಸಾಮಾನ್ಯರಿಗೆ ಆಗುವ ತೊಂದರೆಯನ್ನು ತಪ್ಪಿಸಲು ಬಂದ್​ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ.  ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸೇರಿದ ಭಗತ್ ಸಿಂಗ್ ಗೆಳೆಯರ ಬಳಗದ ಕಾರ್ಯರ್ತರು ಬಂದ್ ವಿರೋಧಿ ಘೋಷಣೆ ಕೂಗುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಅಲ್ಲದೇ ಬಂದ್ ಆಚರಿಸುವ ಬದಲಿಗೆ ನಾಳೆ ಮೂರು ಗಂಟೆ ಹೆಚ್ಚುವರಿ ಕೆಲಸ ಮಾಡಲು ಮನವಿ ಮಾಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv