ಫೌಂಡೇಶನ್​ ಗುಂಡಿಗೆ ಬಿದ್ದ ಹೋರಿ: ಮೆಲೆತ್ತಿದ ಅಗ್ನಿಶಾಮಕ ಸಿಬ್ಬಂದಿ

ಬಳ್ಳಾರಿ: ಕಟ್ಟಡದ ಫೌಂಡೇಶನ್​ಗಾಗಿ ತೆಗೆದಿದ್ದ ನೀರಿಲ್ಲದ ಗುಂಡಿಯಲ್ಲಿ ಬಿದ್ದ ಹೋರಿಯೊಂದು ಮೇಲೆ ಬರಲು ಹರಸಾಹಸ ಪಟ್ಟ ದೃಶ್ಯ ಕಂಡುಬಂದಿದೆ. ನಗರದ ಕುರುಬರ ವಸತಿ ನಿಲಯದ ಬಳಿ ಕಟ್ಟಡದ ಫೌಂಡೇಶನ್​​ಗಾಗಿ 10 ಅಡಿ ಆಳವಾದ ಗುಂಡಿ ತೆಗೆಯಲಾಗಿತ್ತು. ಈ ಗುಂಡಿಯಲ್ಲಿ ಅಕಸ್ಮತಾಗಿ ಹೋರಿಯೊಂದು ಬಿದ್ದು ಮೆಲೆ ಬರಲು ಪರದಾಡುತಿತ್ತು. ಈ ಮೂಕಪ್ರಾಣಿಯ ವೇದನೆ ಕಂಡ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಯಶಸ್ವಿಯಾಗಿ ಹೊರಿ ಮೇಲೆತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv