ಮಾರಮ್ಮ ದೇವಿಗೆ ಬಿಟ್ಟಿದ್ದ ಕೋಣ ತಿವಿದು ರೈತನ ಸಾವು

ತುಮಕೂರು: ಮಾರಮ್ಮ ದೇವಿಗೆ ಬಿಟ್ಟಿದ್ದ ಕೋಣ ತಿವಿದ ಪರಿಣಾಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವ ದುರ್ಮರಣ ಹೊಂದಿದ ಘಟನೆ ಶಿರಾ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ದಾಸಮಾರಪ್ಪ(65) ಎಂದು ಗುರುತಿಸಲಾಗಿದೆ. ದಾಸಮಾರಪ್ಪ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೋಣ ದಾಳಿ ನಡೆಸಿದೆ. ಕೋಣ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತ ಹೊಲದಲ್ಲೇ ಪ್ರಾಣ ಬಿಟ್ಟಿದ್ದಾನೆ. ಇನ್ನು ಕೋಣನ ಅರ್ಭಟಕ್ಕೆ ಹೊನ್ನೇನಹಳ್ಳಿ ಗ್ರಾಮಸ್ಥರು ತತ್ತರಿಸಿದ್ದಾರೆ. ಸ್ಥಳಕ್ಕೆ ಶಿರಾ ಶಾಸಕ ಸತ್ಯನಾರಾಣ್​ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅರಣ್ಯಾಧಿಕಾರಿಗಳು ಕೋಣನ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv