ಕಟ್ಟಡ ಕುಸಿತ: ರಕ್ಷಣಾ ಕಾರ್ಯಾಚರಣೆಗೆ ಬಂದ ದೆಹಲಿಯ ಎನ್​​ಡಿಆರ್​​​ಎಫ್ ತಂಡ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದ ಸ್ಥಳದಲ್ಲಿ  ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. ನಗರದ ಕುಮಾರೇಶ್ವರ ನಗರಕ್ಕೆ ದೆಹಲಿಯಿಂದ ಎನ್​​ಡಿಆರ್​​​ಎಫ್ ತಂಡದ ಜೊತೆಗೆ ಡಾಗ್ ಸ್ಕ್ವಾಡ್ ಆಗಮಿಸಿದೆ. ಎರಡು ಲಾರಿಗಳ ಸಾಮಗ್ರಿಗಳ ಜೊತೆಗೆ ತಂಡ ಆಗಮಿಸಿದೆ. ಈ ಹಿಂದೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿಗೆ ಹಿಂದೆ ಬರುವಂತೆ ಎನ್​​ಡಿಆರ್​​ಎಫ್ ತಂಡದ ಮಖ್ಯಸ್ಥ ಮನವಿ ಮಾಡಿದ್ದಾರೆ. ಸ್ಥಳದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಬೀಡು ಬಿಟ್ಟಿದ್ದಾರೆ. ಈವರೆಗೂ ಸುಮಾರು 58 ಜನರ ರಕ್ಷಣೆ ಮಾಡಲಾಗಿದೆ. 10 ಗಾಯಳುಗಳನ್ನ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈವರೆಗೂ ಘಟನೆಯಿಂದ ನಾಲ್ಕು ಜನ ಸಾವನ್ನಪ್ಪಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv