4 ದಿನಗಳ ನಂತರ ಅವಶೇಷಗಳಡಿಯಿಂದ ಬದುಕಿಬಂದ ಯುವಕ

ಧಾರವಾಡ: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು, ಅವಶೇಷಗಳಡಿ ಸಿಲುಕಿದ್ದ ಯುವಕ ನಾಲ್ಕು ದಿನಗಳ ನಂತರ ಬದುಕಿ ಬಂದಿದ್ದಾರೆ. ಸೋಮು ರಾಮನಗೌಡ ಸಾವನ್ನೆ ಗೆದ್ದು ಬಂದ ಯುವಕ. ಕಟ್ಟಡದ ಅವಶೇಷಗಳ ಅಡಿಯಿಂದ ಸೋಮು ನಡೆದುಕೊಂಡು ಹೊರಬಂದಿದ್ದಾರೆ. ಅವರು ಹೊರೆ ಬರುತ್ತಿದ್ದಂತೆ ರಕ್ಷಣಾ ಸಿಬ್ಬಂದಿ ಚಪ್ಪಾಳೆ ಹೊಡೆಯುವ ಮೂಲಕ ಸಂಭ್ರಮಿಸಿದ್ರು. ಸೋಮು ಸವದತ್ತಿ ತಾಲೂಕಿನ ಚಿಕ್ಕಉಳ್ಳಿಗೇರಿ ಗ್ರಾಮದವರಾಗಿದ್ದು, ಜೆಡಿಎಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv