ಧಾರವಾಡದಲ್ಲಿ ಕಟ್ಟಡ ದುರಂತ; ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಧಾರವಾಡ: ಕಟ್ಟಡ ದುರಂತದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ. ಇಂದು ಕೂಡ ರಕ್ಷಣಾಕಾರ್ಯ ಮುಂದುವರಿದಿದ್ದು, ಇಬ್ಬರ ಶವವನ್ನ ಹೊರಕ್ಕೆ ತರಲಾಗಿದೆ. ಅದರಲ್ಲಿ 8 ವರ್ಷದ ದಿವ್ಯಾ ಎಂಬ ಬಾಲಕಿ ಹಾಗೂ ಮತ್ತೋರ್ವ ಮಹಿಳೆಯ ಮೃತದೇಹವನ್ನ ಹೊರಕ್ಕೆ ತರಲಾಗಿದೆ. ಮಹಿಳೆ ಮೇಲೆ ಕಟ್ಟಡದ ಫಿಲ್ಲರ್​​ ಬಿದ್ದು ಕಾರಣ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.

ಮಾ. 19ರಂದು ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಸಂಪೂರ್ಣ ನೆಲಸಮವಾಗಿತ್ತು. ಕಟ್ಟಡದ ಅವಶೇಷಗಳ ಅಡಿಯಿಂದ ಒಟ್ಟು 61 ಜನರನ್ನ ರಕ್ಷಣೆ ಮಾಡಲಾಗಿದೆ. 9 ಜನ ಮೃತಪಟ್ಟಿದ್ದಾರೆ. ದೆಹಲಿಯ ಎನ್​ಡಿಆರ್​​​ಎಫ್​​​ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈ ಕಟ್ಟಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯ ದೂರದ ಸಂಬಂಧಿ ಗಂಗಪ್ಪ ಶಿಂತ್ರೆ ಅವರು ಪಾಲುದಾರಿಕೆಯನ್ನ ಹೊಂದಿದ್ದಾರೆ ಎಂದು ತಿಳಿದು ಬಂದಿದ್ದು, ದೂರು ದಾಖಲಾಗಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv