ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ ಆಗಿದೆ. ಕುಮಾರೇಶ್ವರ ನಗರ ನಿವಾಸಿಯಾಗಿದ್ದ ಅನೂಪ್ ಕುಡತರಕರ್ ಎಂಬ 23 ವರ್ಷದ ಯುವಕ ಹಾಗೂ 45 ವರ್ಷದ ದ್ರಾಕ್ಷಾಯಿಣಿ ಮುತ್ತೂರು ಎಂಬ ಮಹಿಳೆ ಮೃತರಾಗಿದ್ದಾರೆ. ಅನೂಪ್ ಕುಡತರಕರ್​ ಕುಸಿದ ಕಟ್ಟಡದ ಬಳಿ ಸೈಬರ್ ಕೆಫೆ ನಡೆಸುತ್ತಿದ್ದ. ದ್ರಾಕ್ಷಾಯಿಣಿ ಮುತ್ತೂರು ಕಟ್ಟಡದ ಕೆಳ ಮಹಡಿಯಲ್ಲಿ 8 ತಿಂಗಳಿಂದ ಹೋಟೆಲ್​ ನಡೆಸ್ತಿದ್ರು. ಗಂಡ ಹೊರಗೆ ಹೋದಾಗ ಕಟ್ಟಡ ಕುಸಿದು ಬಿದ್ದಿತ್ತು.
ಕಟ್ಟಡದ ಅವಶೇಷಗಳ ಅಡಿಯಿಂದ ಒಟ್ಟು 60ಕ್ಕೂ ಹೆಚ್ಚು ಜನರನ್ನ ರಕ್ಷಣೆ ಮಾಡಲಾಗಿದ್ದು. ಸದ್ಯದ ಮಾಹಿತಿ ಪ್ರಕಾರ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ ಆಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿಯುತ್ತಿದ್ದು, ನಿನ್ನೆ ರಾತ್ರಿಪೂರ್ತಿ ಎನ್​ಡಿಆರ್​ಎಫ್ ಹಾಗೂ ಎಸ್​ಡಿಆರ್​ಎಫ್ ತಂಡಗಳು ಕಾರ್ಯಾಚರಣೆ ನಡೆಸಿದ್ವು.