ಧಾರವಾಡ ಕಟ್ಟಡ ಕುಸಿತ ಪ್ರಕರಣ: ಕಟ್ಟಡದ ನಾಲ್ವರು ಪಾಲುದಾರರು ಸರೆಂಡರ್​

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಟ್ಟಡದ ನಾಲ್ವರು ಪಾಲುದಾರರು ಪೊಲೀಸರಿಗೆ ಶರಣಾಗಿದ್ದಾರೆ. ನಿನ್ನೆ ಮಧ್ಯರಾತ್ರಿಯೇ ನಾಲ್ವರು ಆರೋಪಿಗಳು ಧಾರವಾಡದ ಉಪ ನಗರ ಪೊಲೀಸ್ ಠಾಣೆಯಲ್ಲಿ ಸರೆಂಡರ್ ಆಗಿದ್ದಾರೆ. ಮಾಜಿ ಶಾಸಕ ವಿನಯ ಕುಲಕರ್ಣಿ ಅವರ ಮಾವ ಗಂಗಪ್ಪ ಶಿಂತ್ರೆ, ರವಿ ಸಬರದ, ಬಸವರಾಜ ನಿಗದಿ ಹಾಗೂ ರಾಜು ಘಾಟಿನ್ ಪೊಲೀಸರಿಗೆ ಸರೆಂಡರ್ ಆಗಿರುವವರು.

ಈ ವೇಳೆ ಮಾತನಾಡಿದ ಆರೋಪಿ ಬಸವರಾಜ ನಿಗದಿ, ನಮ್ಮನ್ನು ಯಾರೂ ಅರೆಸ್ಟ್ ಮಾಡಿಲ್ಲ. ನಾವಾಗಿಯೇ ಸರೆಂಡರ್ ಆಗಿದ್ದೇವೆ. ಸಾವು ನೋವುಗಳನ್ನ ನೋಡಿ ಮನಸ್ಸಿಗೆ ಬೇಸರವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಾವೂ ಆಗ್ರಹಿಸುತ್ತೇವೆ ಎಂದರು. 1,10,000 ಚ.ಅಡಿ ಅಳತೆಯಲ್ಲಿ ನಿರ್ಮಾಣವಾದ ಈ ಕಟ್ಟಡ ಭೂಕಂಪಕ್ಕೂ ಜಗ್ಗಲ್ಲ ಅಂತಾ ಆರ್ಕಿಟೆಕ್ಟ್ ವಿವೇಕ್ ಪವಾರ ಹೇಳಿದ್ದರು. ನಮ್ಮ ನೋವು ನಮಗೆ ಗೊತ್ತು. ನಾವು ಟೆಕ್ನೀಶಿಯನ್ ಅಲ್ಲ. ಮೊದಲ ಬಾರಿಗೆ ಈ ರೀತಿ ವಾಣಿಜ್ಯ ಮಳಿಗೆ ನಿರ್ಮಿಸಿದ್ದೇವೆ. ಕಟ್ಟಡ ಕುಸಿತವಾದ ದಿನ ನಾವೂ ಅಲ್ಲೇ ಇದ್ದೆವು. ಅಂದು ಕೆಲಸಗಾರರಿಗೆ ಪೇಮೆಂಟ್ ಮಾಡಿ ಮನೆಗೆ ಹೋಗಿದ್ದೆವು. ಇಂಜಿನಿಯರ್ ತಪ್ಪಿನಿಂದ ಈ ಅಚಾತುರ್ಯ ನಡೆದಿದೆ. ಬಿರುಕು ಬಿದ್ದಿದ್ದರ ಕುರಿತು ಪವಾರ್‌ಗೆ ಕೇಳಿದ್ದೆವು. ಗಿಲಾವು ಮಾಡುವುದಾಗಿ ಅವರು ಹೇಳಿದ್ದರು ಎಂದು ಬಸವರಾಜ ನಿಗದಿ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv