ಕಟ್ಟಡ ದುರಂತ ಪ್ರಕರಣ: 7 ಮಂದಿ ಪಾಲಿಕೆ ಅಧಿಕಾರಿಗಳು ಅಮಾನತು

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ 7 ಮಂದಿ ಪಾಲಿಕೆ ಅಧಿಕಾರಿಗಳನ್ನು ಅಮಾನತು ಮಾಡಿ ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ನಗರ ಯೋಜಕ ಮುಕುಂದ ಜೋಷಿ, ನಗರ ಯೋಜನೆ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಗದಗ, ಕಂದಾಯ ಇಲಾಖೆ ವಲಯ ಅಧಿಕಾರಿ ಪ್ರಭಾಕರ್ ದೊಡ್ಡಮನಿ, ಕಾರ್ಯನಿರ್ವಾಹಕ ಇಂಜನೀಯರ್ ವಿ.ಶ್ರೀಧರ, ಸಹಾಯಕ ಕಾರ್ಯ ನಿರ್ವಾಹಕ ಇಂಜನೀಯರ್ ಚಂದ್ರಪ್ಪ, ನಗರ ಯೋಜನೆ ಇಲಾಖೆ ಉಪನಿರ್ದೇಶಕ ಬಿ.ವಿ.ಹಿರೇಮಠ, ಸಹಾಯಕ ಆಯುಕ್ತ ಸಂತೋಷ ಅನಿಶೆಟ್ಟರ್ ಅಮಾನತ್ತುಗೊಂಡ ಅಧಿಕಾರಿಗಳು.

ಕಟ್ಟಡ ದುರಂತದಲ್ಲಿ ಇದುವರೆಗೆ 15 ಜನ ದುರ್ಮರಣ ಹೊಂದಿದ್ದಾರೆ. ನಿನ್ನೆ ರಾತ್ರೋರಾತ್ರಿ ನಾಲ್ವರು ಆರೋಪಿಗಳು ಉಪನಗರ ಪೊಲೀಸ್ ಠಾಣೆಗೆ ಸರೆಂಡರ್‌ ಆಗಿದ್ದರು. ಅನಾರೋಗ್ಯ ಕಾರಣ ಕಟ್ಟಡದ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿಯ ಕಿಮ್ಸ್  ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನಯ್ ಕುಲಕರ್ಣಿ ಮಾವ ಗಂಗಪ್ಪ ಶಿಂತ್ರಿ, ಬಸವರಾಜ ನಿಗದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv