ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆ ಆಗಿದೆ. ಕಟ್ಟಡದಡಿ‌ ಸಿಲುಕಿದ್ದ ಯುವತಿ‌ಯ ಶವವನ್ನ ಎನ್.ಡಿ.ಆರ್.ಎಫ್ ತಂಡ ಹೊರ ತೆಗೆದಿದೆ. ತಂಡದಿಂದ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಸ್ಥಳದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್​​ ಅವರ ಬಿಡುಬಿಟ್ಟಿದ್ದಾರೆ. ಈವರೆಗೆ 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಕಟ್ಟಡ ಕುಸಿತದಲ್ಲಿ ಮೃತಪಟ್ಟ ನಾಲ್ವರ ಹೆಸರು ಪತ್ತೆಯಾಗಿದ್ದು, ಇನ್ನೂ ಇಬ್ಬರ ಹೆಸರು ಪತ್ತೆಗೆಗಾಗಿ ಶೋಧ ನಡೆಯುತ್ತಿದೆ.

1) ಸಲೀಂ ಮಕಾಂದರ್, (35) ಹುಬ್ಬಳ್ಳಿ ಆನಂದನಗರ ನಿವಾಸಿ.

2) ಅಶೀತ್ ಹಿರೇಮಠ (32) ಧಾರವಾಡ ಮರಾಠಾ ಕಾಲನಿ ನಿವಾಸಿ.

3) ಮಾಬುಸಾಬ್ ರಾಯಚೂರ (48) ಹುಬ್ಬಳ್ಳಿಯ ಶಿವಶಕ್ತಿ ನಗರ ನಿವಾಸಿ.

4) ಮೆಹಬುಸಾಬ್ ದೇಸಾಯಿ (55) ಹುಬ್ಬಳ್ಳಿಯ ಆನಂದನಗರ ನಿವಾಸಿ.

ಮೃತರ ಸಂಬಂಧಿಕರಿಂದ ದಾಖಲೆ ಪಡೆದುಕೊಂಡು, ಶವ ಪರೀಕ್ಷೆಯ ನಂತರ ಶವ ಹಸ್ತಾಂತರ ಮಾಡುವುದಾಗಿ ಜಿಲ್ಲಾ ಆಸ್ಪತ್ರೆ ವೈದ್ಯಧಿಕಾರಿಗಳು ತಿಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv