ಗಾಳಿ, ಮಳೆಗೆ ಉರುಳಿ ಬಿದ್ದ ಜಾಹಿರಾತು ಸ್ಕ್ರೀನಿಂಗ್ ಕಂಬ

ಬೆಂಗಳೂರು: ಗಾಳಿ, ಮಳೆಯಿಂದಾಗಿ ಜಾಹಿರಾತು ಸ್ಕ್ರೀನಿಂಗ್ ಪರದೆ ಅಳವಡಿಸಿದ್ದ ಕಂಬ ಉರುಳಿ ಬಿದ್ದು ಕಟ್ಟಡ ಜಖಂಗೊಂಡಿರೋ ಘಟನೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ವರದಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಎಲೆಕ್ಟ್ರಾನಿಕ್ ಸಿಟಿಯ ಕೋಣಪ್ಪನ ಅಗ್ರಹಾರ ಸಿಗ್ನಲ್ ಬಳಿ ಜಾಹೀರಾತು ಸ್ಕ್ರೀನ್ ಮಾಡಲು ಸುಮಾರು 50 ಅಡಿ ಎತ್ತರದ ಬೃಹತ್ ಕಬ್ಬಿಣದ ಕಂಬವನ್ನ ನಿಲ್ಲಿಸಲಾಗಿತ್ತು. ಗಾಳಿ ಸಮೇತ ಮಳೆಯಾಗಿದ್ದರಿಂದ ಕಂಬ ಉರುಳಿ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ತೆರವು ಕಾರ್ಯಚರಣೆ ನಡೆಸಿದ್ದಾರೆ.