ಬಿಎಸ್​ವೈ ಸಿಎಂ ಆಗ್ತಾರೆ, ರಂಭಾಪುರಿ ಶ್ರೀ ಭವಿಷ್ಯ

ತುಮಕೂರು: ಅಕ್ಟೋಬರ್ ಎರಡನೇ ವಾರದಲ್ಲಿ ಸಮ್ಮಿಶ್ರ ಸರ್ಕಾರ ಉರುಳುತ್ತಾ….? ಮತ್ತೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗ್ತಾರಾ..? ರಂಭಾಪುರಿ ಶ್ರೀಗಳ ಭವಿಷ್ಯ ಇಂಥದ್ದೊಂದು ಪ್ರಶ್ನೆಯನ್ನ ಹುಟ್ಟುಹಾಕಿದೆ.
ಯಡಿಯೂರಪ್ಪನವರ ಜಾತಕ ಕುಂಡಲಿಯಲ್ಲಿ ಈ ಮಹಾಯೋಗ ಇದೆಯಂತೆ. ಹಾಗಂತ ಭವಿಷ್ಯ ನುಡಿದಿರೋ ರಂಭಾಪುರಿ ಶ್ರೀ, ಅಕ್ಟೋಬರ್ ಎರಡನೇ ವಾರದಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ. ಅವರ ಕುಂಡಲಿ ಪ್ರಕಾರ ಅವರಿಗೆ ಸಿಎಂ ಆಗುವ ಯೋಗವಿದೆ. ಅಕ್ಟೋಬರ್ ಎರಡನೇ ವಾರದ ಅಪೂತ್ವ ಘಟ್ಟದಲ್ಲಿ ಮತ್ತೋರ್ವ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ‌ಯೋಗವಿದೆ. ಖಂಡಿತವಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗ್ತಾರೆ. ಯಡಿಯೂರಪ್ಪರ ದಿಟ್ಟತನ ಎಲ್ಲರಿಗೆ ಮಾದರಿ, ಕಷ್ಟ ಸಹಿಸಿಕೊಂಡು ಅವರು ಮುಂದೆ ಹೋಗುತಿದ್ದಾರೆ. ಹಾಗಾಗಿ ಅವರಿಗೆ ಮುಂದೆ ಯೋಗ ಕೂಡಿ ಬರಲಿದೆ ಎಂದು ನೋಣವಿನಕೆರೆ ಕಾಡುಸಿದ್ದೇಶ್ವರ ಮಠದ ಧಾರ್ಮಿಕ ಸಮಾರಂಭದಲ್ಲಿ ರಂಭಾಪುರಿ ಶ್ರೀ ಭವಿಷ್ಯ ನುಡಿದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv