ಅಪ್ಪ-ಮಕ್ಕಳದ್ದಾಯ್ತು, ಈಗ ಮೊಮ್ಮಕ್ಕಳ ಕಾಟವೂ ಶುರುವಾಗಿದೆ: ಬಿಎಸ್‌ವೈ

ಹುಬ್ಬಳ್ಳಿ: ಹತ್ತು ವರ್ಷ ದೇಶದ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ರನ್ನು ಕಾಂಗ್ರೆಸ್‌ನವರು ಮರೆತಿದ್ದಾರೆ. ಪ್ರಾಮಾಣಿಕರಾಗಿದ್ದರೂ ಸೋನಿಯಾ ಗಾಂಧಿ ಮಾತು ಕೇಳಿ ಹಾಳಾದ್ರು. ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮನೆಗೆ ಹೋಗುತ್ತಾರೆ. ಕೋಲಾರದಲ್ಲಿ ಮುನಿಯಪ್ಪ ಮನೆಗೆ ಹೋಗುತ್ತಾರೆ. ಕುಮಾರಸ್ವಾಮಿ‌ ರೋಡ್‌ಶೋ ದಲ್ಲಿ ಮಾಧ್ಯಮಗಳಿಗೆ ಧಮ್ಕಿ ಹಾಕಿದ್ದು ಖಂಡನೀಯ ಎಂದು ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಕ್ರೋಶ ಹೊರಹಾಕಿದ್ದಾರೆ. ಇನ್ನು  ಇದೇ ವೇಳೆ ಮಾತನಾಡಿದ ಇವರು, ಸಿಎಂ ಸುಮಲತಾ ಪರ ಹೆಚ್ಚು ಪ್ರಚಾರ ಮಾಡಿದ್ರೆ ಜನರು ಹಲ್ಲೆ ಮಾಡುತ್ತಾರೆ ಎಂದಿದ್ದೀರಿ. ನೀವು ಕೂಡಲೇ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು. ಚಲನಚಿತ್ರ ನಟರ ಬಗ್ಗೆ ಹಗುರವಾಗಿ ಮಾತನಾಡುತ್ತೀರಾ, ಹಲ್ಲೆಗೆ ಯತ್ನಿಸುತ್ತೀರಾ, ನಿಮ್ಮ ಗೂಂಡಾಗಿರಿ ಹೆಚ್ಚು ದಿನ ಇರಲ್ಲ. ಲೋಕಸಭಾ ಚುನಾವಣೆಯ ನಂತರ ಅಪ್ಪಮಕ್ಕಳ ಆಟ ನಡೆಯಲ್ಲ. ಅಪ್ಪಮಕ್ಕಳಾಯ್ತು ಈಗ ಮೊಮ್ಮಕ್ಕಳ ಕಾಟವೂ ಶುರುವಾಗಿದೆ ಎಂದು ದೇವೇಗೌಡ ಮತ್ತು ಕುಮಾರಸ್ವಾಮಿಯವರ ವಿರುದ್ಧ ಬಿಎಸ್‌ವೈ ವಾಗ್ದಾಳಿ  ನಡೆಸಿದ್ರು. ಅಲ್ಲದೇ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ದೇವೇಗೌಡರು ತಿರುಕನ ಕನಸು ಕಾಣುತ್ತಿದ್ದಾರೆ. ನಾನು ಪ್ರಲ್ಹಾದ್ ಜೋಶಿಯವರನ್ನು ಗೆಲ್ಲಿಸುವಂತೆ ನಿಮ್ಮಲ್ಲಿ ಕೈಮುಗಿದು ಕೇಳುತ್ತೇನೆ. ಕುಲಗೆಟ್ಟ ಕುಮಾರಸ್ವಾಮಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೋದಿಯವರು ಮತ್ತೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ರೇವಣ್ಣ ಹೇಳಿದ್ದಾನೆ. ರೇವಣ್ಣ ಇವತ್ತೆ ರಾಜಕೀಯ ನಿವೃತ್ತಿ ಪತ್ರ ಬರೆಯಲಿ. ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದು ಸೂರ್ಯ-ಚಂದ್ರರು ಇರುವಷ್ಟೇ ಸತ್ಯ ಎಂದು ಗಾಮನಗಟ್ಟಿಯಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಎಸ್‌ವೈ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv