ಮೊದಲು ಅನೈತಿಕ ರಾಜಕಾರಣ ಮಾಡಿದ್ದು ಬಿಎಸ್​ವೈ: ಸಿದ್ದರಾಮಯ್ಯ ಕಿಡಿ

ವಿಜಯಪುರ: ಮೊದಲು ಅನೈತಿಕ ರಾಜಕಾರಣ ಮಾಡಿದ್ದು ಬಿ.ಎಸ್. ಯಡಿಯೂರಪ್ಪ. 20, 25 ಕೋಟಿ ಕೊಟ್ಟು 8 ಶಾಸಕರನ್ನ ಖರೀದಿಸಿ ಅಧಿಕಾರ ಹಿಡಿದಿದ್ರು ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ರು. ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲ ಅಂದ್ರೆ ಏನು? ಆಪರೇಷನ್ ಕಮಲ ಅಂದ್ರೆ ದುಡ್ಡು ಕೊಟ್ಟು ಎಂಎಲ್​ಎಗಳನ್ನು ಕೊಂಡುಕೊಳ್ಳುವುದು. ಕುರಿ, ದನ, ಎಮ್ಮೆ ಥರಾ ಕೊಂಡುಕೊಳ್ಳುವುದು. ಈ ಕೆಲಸವನ್ನು ಬಿಜೆಪಿಯ ಯಡಿಯೂರಪ್ಪ ಮಾಡಿದ್ರು ಎಂದರು.
ಈಗಲೂ ಸಹ ಬಿಜೆಪಿಯ ಸಾಕಷ್ಟು ಜನ ಕಾಂಗ್ರೆಸ್​ಗೆ ಬರುತ್ತೇವೆ ಅನ್ನುತ್ತಿದ್ದಾರೆ. ಆದ್ರೆ ನಾವೇ ಬೇಡಪ್ಪ, ನೀವು ಅಲ್ಲೇ ಇರಿ ಅಂತಾ ಹೇಳಿದ್ದೇವೆ. ಜನ ಸಮ್ಮಿಶ್ರ ಸರ್ಕಾರ ಆಗಬೇಕು ಅಂತಾ ಮತ ಹಾಕಿದ್ದಾರೆ. ಅದರಂತೆ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಇನ್ನು ಪ್ರತ್ಯೇಕ ರಾಜ್ಯ ವಿಚಾರವಾಗಿ ಮಾತನಾಡಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೋಸ್ಟಲ್ ಕರ್ನಾಟಕ ಎಂದೇನೂ ಇಲ್ಲ. ಕರ್ನಾಟಕವನ್ನು ನಾನು ಅಖಂಡ ಕರ್ನಾಟಕ ಎಂದು ನೋಡುತ್ತೇನೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು ಎಂದು ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ. ಆದ್ರೆ ಪ್ರತ್ಯೇಕ ಆಗಬೇಕು ಎಂದು ಹೊರಾಡುವುದನ್ನು ನಾನು ವಿರೋಧಿಸುತ್ತೇನೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv