“ವೀರಶೈವ ಲಿಂಗಾಯತ ಸಮುದಾಯದ ಧೀಮಂತ ನಾಯಕ ಬಿಎಸ್​ವೈ”

ತುಮಕೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಅವರು ಒಬ್ಬ ಧೀಮಂತ ನಾಯಕ ಎಂದು ಧೈರ್ಯದಿಂದ ಹೇಳಿಕೊಳ್ಳಬೇಕೆಂದು ಸಿದ್ದಗಂಗಾ ಕಿರಿಯ ಶ್ರೀ ಸಿದ್ಧಲಿಂಗಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ವೀರಶೈವ ಲಿಂಗಾಯತ ಸಮಾಜ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಸಮಾಜದ ಧೀಮಂತ ನಾಯಕರು. ಬಿಎಸ್​​ವೈ ನಮ್ಮ ಸಮುದಾಯದ ನಾಯಕರು ಎಂದು ಸಮಾಜದವರು ಎದೆ ತಟ್ಟಿಕೊಂಡು ಹೇಳುತ್ತಾರೆ. ಆದರೆ, ನಮ್ಮ ಸಮಾಜದ ರಾಜಕೀಯ ಶಕ್ತಿ ದುರ್ಬಲವಾಗುತ್ತಿದೆ. ಈ ಹಿಂದೆ ಇದ್ದ ಒಗ್ಗಟ್ಟು ಈಗ ಇಲ್ಲ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ. ಸಮುದಾಯದಲ್ಲಿ ಮೂಡಿದ ಒಡಕು ಮುಂದಿನ ದಿನಗಳಲ್ಲಿ ಸರಿಹೋಗಬಹುದು ಎಂಬ ನಂಬಿಕೆ ಇದೆ ಎಂದು ಹೇಳಿದರು.
ಇನ್ನು ಬಿಎಸ್​​ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಕುರಿತು ಮಾತನಾಡಿದ ಶ್ರೀಗಳು, ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ವಿಜಯೇಂದ್ರ ಯಡಿಯೂರಪ್ಪರ ಸ್ಥಾನವನ್ನು ತುಂಬುತ್ತಾರೆ. ವರುಣಾದಿಂದ ವಿಜಯೇಂದ್ರಗೆ ಟಿಕೆಟ್​​ ಕೊಟ್ಟಿದ್ರೆ ಅವರು ಗೆಲ್ಲುವುದರ ಜೊತೆಗೆ ನಾಲ್ಕೈದು ಕ್ಷೇತ್ರಗಳು ಗೆಲ್ಲುತ್ತಿದ್ದವು. ಪಕ್ಷವೂ ಅಧಿಕಾರಕ್ಕೆ ಬರುತ್ತಿತ್ತು. ವಿಜೆಯೇಂದ್ರ ಅಪಾರ ಸಂಖ್ಯೆ ಜನ ಬೆಂಬಲ ಹೊಂದಿದ್ದಾರೆ ಎಂದು ಕಿರಿಯ ಶ್ರೀಗಳು ಅಭಿಪ್ರಾಯಪಟ್ಟರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.com