ಮಣ್ಣಲ್ಲಿ ಮಣ್ಣಾದ ಬಿ.ಎಸ್. ಪಾಟೀಲ್​ ಸಾಸನೂರು​

ವಿಜಯಪುರ: ಅನಾರೋಗ್ಯದ ಹಿನ್ನೆಲೆಯಲ್ಲಿ ನಿನ್ನೆ ಇಹಲೋಕ ತ್ಯಜಿಸಿದ ಮಾಜಿ ಸಚಿವ ಬಿ.ಎಸ್ ಪಾಟೀಲ್ ಸಾಸನೂರ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮವಾದ ಮುದ್ದೇಬಿಹಾಳ ತಾಲೂಕಿನ ಹಿರೂರಿನಲ್ಲ್ಲಿ ನೆರೆವೇರಿತು. ಗ್ರಾಮದ ಭೊಗೇಶ್ವರ ಕಾಲೇಜು ಮೈದಾನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಸುತ್ತಿನ ಗುಂಡು ಹಾರಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆಚ್ಚಿನ ನಾಯಕನನ್ನು ಬೀಳ್ಕೊಡಲಾಯಿತು. ಸಚಿವ ಎಂ.ಸಿ. ಮನಗೂಳಿ, ಶಾಸಕರಾದ ಎಂ.ಬಿ. ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್​ ಸೇರಿದಂತೆ ಅವಳಿ ಜಿಲ್ಲೆಯ ಜನಪ್ರತಿನಿಧಿಗಳು, ಮುಖಂಡರು, ಅಪಾರ ಜನಸ್ತೋಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv